ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಮತ್ತೋರ್ವ ಡ್ರಗ್ ಪೆಡ್ಲರ್ ನನ್ನು ಬಂಧಿಸಿದ್ದಾರೆ. ಈತ ಈಗಾಗಲೇ ಬಂಧನಕ್ಕೊಳಗಾಗಿರುವ ಆರೋಪಿ ವಿರೇನ್ ಖನ್ನಾ ಆಪ್ತ ಎಂದು ತಿಳಿದುಬಂದಿದೆ.
ಬಂಧಿತನನ್ನು ಆದಿತ್ಯ ಅಗರ್ವಾಲ್ ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ವಾಸವಾಗಿದ್ದ ಈತ ವಿರೇನ್ ಖನ್ನಾ ಬಂಧನವಾಗುತ್ತಿದ್ದಂತೆಯೇ ಹರ್ಯಾಣಕ್ಕೆ ತೆರಳಿದ್ದ ಎನ್ನಲಾಗಿದೆ. ಇದೀಗ ಆದಿತ್ಯ ಅಗರ್ವಾಲನನ್ನು ಸಿಸಿಬಿ ಪೊಲೀಸರು ಹರ್ಯಾಣದಲ್ಲಿ ಬಂಧಿಸಿದ್ದಾರೆ.
ಆರೋಪಿ ಆದಿತ್ಯ ಅಗರ್ವಾಲ್ ಬೆಂಗಳೂರಿನಲ್ಲಿ ವಾಸವಾಗಿದ್ದನಲ್ಲದೇ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದ. ವಿರೇನ್ ಖನ್ನಾ ಸಹಚರನಂತೆ ಕೆಲಸ ಮಾಡುತ್ತಿದ್ದ. ಚಿತ್ರರಂಗದ ಹಲವರ ಜತೆ ನಿರಂತರ ಸಂಪರ್ಕ ಹೊಂದಿದ್ದ. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಅಗರ್ವಾಲ್ ಮನೆ ಮೇಲೆ ತಡ ರಾತ್ರಿ ದಾಳಿ ನಡೆಸಿದ್ದರು. ಇದೀಗ ಹರ್ಯಾಣದಲ್ಲಿ ಆತನನ್ನು ವಶಕ್ಕೆ ಪಡೆದಿದ್ದಾರೆ.