alex Certify ಸಿಸಿಬಿ ದಾಳಿ ವೇಳೆ ಸ್ಟೋಟಕ ಸಂಗತಿ ಬಹಿರಂಗ: ವಿರೇನ್‌ ಖನ್ನಾ ಮನೆಯಲ್ಲಿ ಪೊಲೀಸ್‌ ಸಮವಸ್ತ್ರ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಸಿಬಿ ದಾಳಿ ವೇಳೆ ಸ್ಟೋಟಕ ಸಂಗತಿ ಬಹಿರಂಗ: ವಿರೇನ್‌ ಖನ್ನಾ ಮನೆಯಲ್ಲಿ ಪೊಲೀಸ್‌ ಸಮವಸ್ತ್ರ ಪತ್ತೆ

ಸ್ಯಾಂಡಲ್‌ ವುಡ್‌ ಗೆ ಡ್ರಗ್ಸ್‌ ನಂಟಿನ ಕುರಿತಂತೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದು, ಈಗಾಗಲೇ ನಟಿ ರಾಗಿಣಿ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಅಲ್ಲದೆ ಇಂದು ಬೆಳಿಗ್ಗೆ ಮತ್ತೊಬ್ಬ ನಟಿ ಸಂಜನಾ ಮನೆ ಹಾಗೂ ಈಗಾಗಲೇ ಬಂಧನದಲ್ಲಿರುವ ವಿರೇನ್‌ ಖನ್ನಾ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

ನಟಿ ರಾಗಿಣಿ ಆಪ್ತ ವಿರೇನ್‌ ಖನ್ನಾ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ ಕರ್ನಾಟಕ ಪೊಲೀಸ್‌ ಗೆ ಸೇರಿದ ಸಮವಸ್ತ್ರ ಸಿಕ್ಕಿದೆ ಎನ್ನಲಾಗಿದ್ದು, ಈತ ಇದನ್ನು ಇಟ್ಟುಕೊಂಡಿದ್ದು ಯಾಕೆ ಎಂಬ ಪ್ರಶ್ನೆ ಈಗ ಮೂಡಿದೆ. ನಕಲಿ ಯೂನಿಫಾರಂ ಬಳಸಿ ವಿರೇನ್‌ ಖನ್ನಾ‌ ಅಕ್ರಮ ಚಟುವಟಿಕೆ ನಡೆಸುತ್ತಿದ್ದನಾ ಎಂಬ ಅನುಮಾನ ಈಗ ವ್ಯಕ್ತವಾಗುತ್ತಿದೆ.

ಇದರ ಮಧ್ಯೆ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳೊಂದಿಗೆ ವಿರೇನ್‌ ಖನ್ನಾ ಸಂಪರ್ಕ ಹೊಂದಿದ್ದನೆನ್ನಲಾಗಿದ್ದು, ವಿಚಾರಣೆ ವೇಳೆ ಮತ್ತಷ್ಟು ಸ್ಪೋಟಕ ಮಾಹಿತಿಗಳು ಬಹಿರಂಗವಾಗಲಿವೆ ಎಂದು ಹೇಳಲಾಗುತ್ತಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...