ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿದಂತೆ ಕೆಲ ರೈತ ವಿರೋಧಿ ಕಾಯ್ದೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿದೆ ಎಂಬ ಕಾರಣಕ್ಕೆ ಇದನ್ನು ವಿರೋಧಿಸಿ ರೈತ ನಾಯಕರು ಸೆಪ್ಟೆಂಬರ್ 28 ರ ಸೋಮವಾರದಂದು ‘ಕರ್ನಾಟಕ ಬಂದ್’ ಗೆ ಕರೆ ನೀಡಿದ್ದಾರೆ.
ಈ ‘ಬಂದ್’ ಕರೆಗೆ ಕನ್ನಡಪರ ಸಂಘಟನೆಗಳು, ದಲಿತ ಸಂಘಟನೆಗಳು, ಟ್ಯಾಕ್ಸಿ ಚಾಲಕರ ಸಂಘ ಸೇರಿದಂತೆ ನೂರಾರು ಸಂಘಟನೆಗಳು ಬೆಂಬಲ ಸೂಚಿಸಿದ್ದು, ಹೀಗಾಗಿ ಸೋಮವಾರದ ‘ಕರ್ನಾಟಕ ಬಂದ್’ ಬಹುತೇಕ ಯಶಸ್ವಿಯಾಗುವುದು ನಿಶ್ಚಿತವೆನ್ನಲಾಗುತ್ತಿದೆ.
ಅಂದು ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಸೇವೆಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದ್ದು, ಅದಕ್ಕೂ ಮುನ್ನ ಅಂದರೆ ಇಂದಿನಿಂದ ರಾಜ್ಯದ ಪ್ರತಿ ಹಳ್ಳಿಯಲ್ಲೂ ಪ್ರತಿಭಟನೆ ನಡೆಸಲು ರೈತ ಸಂಘ ಸಜ್ಜಾಗಿದೆ.