ಬೆಂಗಳೂರು: ಆರ್ ಎಸ್ ಎಸ್ ನನ್ನ ಮೊದಲ ರಾಜಕೀಯ ಪ್ರತಿಸ್ಪರ್ಧಿ. ನಾನು ಆರ್ ಎಸ್ ಎಸ್ ವಿರೋಧಿ. ಆರ್ ಎಸ್ ಎಸ್ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಹೇಳುವ ಮಾಜಿ ಸಚಿವ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆರ್ ಎಸ್ ಎಸ್ ಸಂಸ್ಥಾಪಕ ಸದಸ್ಯನಾ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಸಿ.ಟಿ. ರವಿ ವಿರುದ್ಧ ಕೆಂಡಾಮಂಡಲರಾದ ಸಿದ್ದರಾಮಯ್ಯ, ಆರ್ ಎಸ್ ಎಸ್ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಲು ಸಿ.ಟಿ.ರವಿ ಕೇಶವ ಹೆಡಗೆವಾರ್ ಜೊತೆ ಇದ್ನಾ? ಕೇಶವ ಹೆಡಗೆವಾರ್ ಕಾಂಗ್ರೆಸ್ ನಲ್ಲಿದ್ದವರು. ಗೋಲ್ವಾಲ್ಕರ್ ಮೊದಲು ಎಲ್ಲಿದ್ದರು? ಕಾಂಗ್ರೆಸ್ ನಲ್ಲಿದ್ದರು ತಾನೆ? ಜನಸಂಘ ಇದ್ದಾಗ ಸಿ.ಟಿ.ರವಿ ಎಲ್ಲಿದ್ದ? ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ಇನ್ನು ಗೋಹತ್ಯೆ ನಿಷೇಧದ ಬಗ್ಗೆ ಮಾತಾಡ್ತಾರೆ. ಗೋಹತ್ಯೆ ಮಾಡಿ, ವಿದೇಶಕ್ಕೆ ರಫ್ತು ಮಾಡುತ್ತಿರುವವರು ಯಾರೆಂದು ಮೊದಲು ಹೇಳಲಿ. ಸಿ.ಟಿ. ರವಿ ಅನಗತ್ಯ ಮಾತನಾಡುವ ಬದಲು ವಿಧಾನಸಭೆಯಲ್ಲಿ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.