ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ದರೋಡೆಕೋರರ ಹಾವಳಿ ಹೆಚ್ಚುತ್ತಿದ್ದು, ಗಾಂಜಾ ಮತ್ತಿನಲ್ಲಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ದರೋಡೆಗೆ ಸಿದ್ಧತೆ ನಡೆಸಿದ್ದ 6 ಜನರ ಗ್ಯಾಂಗ್ ನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ.
ಮುರುಗೇಶ ಪೂಜಾರಿ (20), ಮಹಮ್ಮದ್ ಯಾಸಿನ್ (23), ಮೊಹಲ್ಲಾದ ಅಜ್ಮಿತ್ ಅಸ್ಲಾಂ (19), ಗುಲಾಮ್ ಮುಸ್ತಫಾ (19), ಮರ್ಧಾನ್ ಶಫಿಸಾಬ (19) ಹಾಗೂ ಚರಣ್ ನಾಯ್ಕ್ (19) ಬಂಧಿತ ಆರೋಪಿಗಳು. ಬಂಧಿತರಿಂದ 20 ಸಾವಿರ ರೂ ಮೌಲ್ಯದ 912 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಪ್ರಮುಖ ಆರೋಪಿ ಮಂಜುನಾಥ್ ಅಲಿಯಾಸ್ ಮಿಂಟಾ ಮಾರುತಿ ಪೂಜಾರಿ ಪರಾರಿಯಾಗಿದ್ದಾನೆ. ಶಿರಸಿ-ಯಲ್ಲಾಪುರ ರಸ್ತೆ ಬಳಿ ತಡ ರಾತ್ರಿ ಈ ಗ್ಯಾಂಗ್ ನ್ನು ವಶಕ್ಕೆ ಪಡೆಯಲಾಗಿದೆ. ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.