ಈಗಾಗಲೇ ನಟನಾಗಿ ಮಿಂಚಿರುವ ನಿಖಿಲ್ ಕುಮಾರಸ್ವಾಮಿ, ರಾಜಕೀಯಕ್ಕೆ ಎಂಟ್ರಿ ಕೊಟ್ಟು ಸೋಲುಂಡರು. ಇದೀಗ ಇವೆರಡರ ಜೊತೆಗೆ ನಿರ್ಮಾಪಕರಾಗಲು ತಯಾರಿ ನಡೆಸಿದ್ದಾರೆ. ಈಗಾಗಲೇ ಚೆನ್ನಾಂಬಿಕಾ ಫಿಲ್ಮ್ಸ್ ಬ್ಯಾನರ್ ಇದೆಯೆಲ್ಲಾ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಇದನ್ನು ಹೊರತುಪಡಿಸಿ ತಮ್ಮದೇ ಆದ ಬ್ಯಾನರ್ ಶುರು ಮಾಡುತ್ತಿದ್ದಾರೆ.
ಹೌದು, ನಿಖಿಲ್ ಹೊಸದಾಗಿ ಎನ್.ಕೆ. ಎಂಟರ್ಟೈನ್ಮೆಂಟ್ಸ್ ಎಂಬ ಬ್ಯಾನರ್ ಪ್ರಾರಂಭ ಮಾಡಿದ್ದಾರೆ. ಈ ಬ್ಯಾನರ್ನಲ್ಲಿ ಸಂಗೀತ್ ಅನ್ನೋ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಸಾದ್ ಖಾನ್ ನಿರ್ದೇಶನ ಮಾಡುತ್ತಿದ್ದಾರೆ.
ನಾಲ್ಕೈದು ಸಿನಿಮಾಗಳ ಮೂಲಕ ಹೆಸರು ಮಾಡಿದ್ದ ಈ ನಟ ಇತ್ತೀಚೆಗಷ್ಟೆ ಹಳ್ಳಿಯಲ್ಲಿ ಕೃಷಿಯತ್ತ ಮುಖ ಮಾಡಿದ್ದರು. ಇದೀಗ ಅದರ ಜೊತೆ ಜೊತೆಯಲ್ಲಿಯೇ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಒಟ್ನಲ್ಲಿ ಸಿನಿಮಾ, ರಾಜಕೀಯ, ಕೃಷಿ ಹೀಗೆ ಸಾಕಷ್ಟು ವಿಭಾಗದಲ್ಲಿ ತಮ್ಮನ್ನು ತಾವು ತೊಡಗಿಕೊಳ್ಳುತ್ತಿದ್ದಾರೆ.