ಬೆಂಗಳೂರು: ಸಿಡಿ ಪ್ರಕರಣದ ಮಹಾನಾಯಕ ಯಾರೆಂದು ಸಧ್ಯದಲ್ಲೇ ಸಷ್ಟವಾಗಿ ಗೊತ್ತಾಗುವ ಕಾಲ ಬಂದಿದೆ. ಒಂದಲ್ಲ ಒಂದು ದಿನ ಯುವತಿ ಬಾಯ್ಬಿಡುತ್ತಾಳೆ ಎಂಬುದು ಗೊತ್ತಿತ್ತು. ಇದೀಗ ಹೆಸರನ್ನು ಆಕೆ ಪ್ರಸ್ತಾಪಿಸಿದ್ದಾಳೆ ಎಂದು ಸಚಿವ ಎಸ್.ಟಿ. ಸೋಮಶೇಖರ್, ಡಿ.ಕೆ. ಶಿವಕುಮಾರ್ ಗೆ ಟಾಂಗ್ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ಹಿಂದಿನ ಮಹಾನಾಯಕ ಯಾರಿರಬಹುದು ಎಂಬ ಕುತೂಹಲ ನನ್ನನ್ನೂ ಸೇರಿದಂತೆ ಇಡೀ ರಾಜ್ಯದ ಜನರಲ್ಲಿ ಇತ್ತು. ಈಗ ಸ್ವತಃ ಯುವತಿಯೇ ಓರ್ವರ ಹೆಸರನ್ನು ಪ್ರಸ್ತಾಪಿಸಿದ್ದಾಳೆ. ಈ ಬಗ್ಗೆ ತನಿಖೆಯಾಗಿ ಸತ್ಯಾಸತ್ಯತೆ ಹೊರಬರಲಿ. ಆ ಮಹಾನಾಯಕ ಯಾರೆಂಬುದು ಹೊರಬರಬೇಕು ಎಂದು ಹೇಳಿದರು.
ಕೊನೆಗೂ ಸಿಡಿ ಲೇಡಿ ಜಾಡು ಪತ್ತೆ ಹಚ್ಚಿದ ಎಸ್ಐಟಿ
ಸಿಡಿ ಪ್ರಕರಣದ ಬಗ್ಗೆ ಎಸ್ಐಟಿ ತನಿಖೆ ನಡೆಸುತ್ತಿದೆ. ಅಂದು ರಮೇಶ್ ಜಾರಕಿಹೊಳಿ ಇದು ಷಡ್ಯಂತ್ರ, ನಕಲಿ ಸಿಡಿ ಎಂದಿದ್ದರು. ಈಗ ಯುವತಿ ಕೂಡ ಇದು ಗ್ರಾಫಿಕ್ಸ್ ಎನ್ನುತ್ತಿದ್ದಾಳೆ. ಆದ್ದರಿಂದ ಎಲ್ಲವೂ ತನಿಖೆಯಾಗಲಿ. ಎಸ್ಐಟಿ ತನಿಖೆ ಬಳಿಕ ಸತ್ಯಾಸತ್ಯತೆ ಬಹಿರಂಗವಾಗಲಿ ಎಂದು ಹೇಳಿದರು.