ಬೆಳಗಾವಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬಗ್ಗೆ ನನ್ನನ್ನು ಏನೂ ಕೇಳಬೇಡಿ, ಈ ವಿಚಾರವಾಗಿ ನಾನು ಸಧ್ಯಕ್ಕೆ ಏನೂ ಮಾತನಾಡಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಲೋಕಸಭಾ ಉಪಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಿಡಿ ಕೇಸ್ ಬಗ್ಗೆ ಏನೂ ಕೇಳಬೆಡಿ. ಅದರ ಬಗ್ಗೆ ನಾನು ಮಾತನಾಡಲ್ಲ. ಕಾನೂನು ಇದೆ, ನ್ಯಾಯಾಲಯವಿದೆ ಏನಾಗುತ್ತೆ ನೋಡೋಣ. ನನಗೆ ಚುನಾವಣೆ ಮುಖ್ಯ. ಮೊದಲು ಉಪಚುನಾವಣೆ ಎದುರಿಸೋಣ. ಚುನಾವಣೆ ನಂತರ ಸಿಡಿ ಪ್ರಕರಣದ ಬಗ್ಗೆ ನೋಡೋಣ ಎಂದರು.
ಸಿಡಿ ಪ್ರಕರಣಕ್ಕೆ ರೋಚಕ ತಿರುವು, ಸಿಡಿಯಲ್ಲಿದ್ದ ಯುವತಿಯಿಂದ ಮಹತ್ವದ ನಿರ್ಧಾರ
ಚುನಾವಣೆ ಎಂದರೆ ಪ್ರಜಾಪ್ರಭುತ್ವದ ಹಬ್ಬ. ಹೀಗಿರುವಾಗ ಬೆಳಗಾವಿಯಲ್ಲಿ ಆಕಸ್ಮಿಕವಾಗಿ ಚುನಾವಣೆ ಎದುರಾಗಿದೆ. ಸರ್ಕಾರದ ವೈಫಲ್ಯವನ್ನು ಸ್ವತಃ ಜನರು ನೋಡುತ್ತಿದ್ದಾರೆ. ಯಾವುದೇ ಪರಿಹಾರಗಳಾಗಲಿ, ಉದ್ಯೋಗವಾಗಲಿ, ರೈತರ ಬೆಳೆಗೆ ಬೆಲೆಗಳಾಗಲಿ ಯಾವುದೊಂದು ಸಿಕ್ಕಿಲ್ಲ. ಅಭಿವೃದ್ಧಿ ಕಾರ್ಯಗಳಂತು ನಿಂತುಹೋಗಿದೆ. ಜನರಿಗೆ ಎಲ್ಲವೂ ಅರ್ಥವಾಗುತ್ತಿದೆ. ಅವರು ತಮ್ಮ ಮತಗಳನ್ನು ನೀಡಿ ಕಾಂಗ್ರೆಸ್ ಅಭ್ಯರ್ಥಿಯನ್ನು ಜನರ ದನಿಯಾಗಿ ಆಯ್ಕೆ ಮಾಡಿ ಸಂಸತ್ ಗೆ ಕಳುಹಿಸಬೇಕಾಗಿದೆ ಎಂದು ಹೇಳಿದರು.