ಒಂದು ಅಂದಾಜಿನ ಪ್ರಕಾರ ದೇಶದಲ್ಲಿ ಪ್ರತಿವರ್ಷ 2500 ಮಂದಿ ಸಿಡಿಲಿಗೆ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಇದನ್ನು ತಡೆಗಟ್ಟಲು ಮುಂದಾಗಿರುವ ಕೇಂದ್ರ ಸರ್ಕಾರ ‘ಧಾಮಿನಿ’ ಎಂಬ ಆಪ್ ಅಭಿವೃದ್ಧಿಪಡಿಸಿದ್ದು, ಜನತೆಗೆ ಅನುಕೂಲಕರವಾಗಲಿದೆ.
ಈ ಆಪ್ ಅನ್ನು ರೈತರು ತಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಡೌನ್ಲೋಡ್ ಮಾಡಿಕೊಂಡು ಹೆಸರು, ವಿಳಾಸ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ನೀಡಿದರೆ ಅವರಿರುವ ಪ್ರದೇಶದಲ್ಲಿ ಸಿಡಿಲಿನ ಕುರಿತು ಈ ಆಪ್ ಮುಂಚಿತವಾಗಿಯೇ ಮುನ್ಸೂಚನೆ ನೀಡುತ್ತದೆ.
ಆಗ ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳಿ ಪ್ರಾಣಾಪಾಯದಿಂದ ಪಾರಾಗಬಹುದಾಗಿದೆ. ಹವಾಮಾನ ಮುನ್ಸೂಚನೆ ಕೇಂದ್ರದ ಮುಖ್ಯ ಕಚೇರಿಯೊಂದಿಗೆ ಈ ಆಪ್ ಜೋಡಣೆಯಾಗಿರುವ ಕಾರಣ ಪ್ರತಿ ಹದಿನೈದು ನಿಮಿಷಗಳಿಗೊಮ್ಮೆ ಮಾಹಿತಿ ಅಪ್ಡೇಟ್ ಆಗುತ್ತಿರುತ್ತದೆ ಎನ್ನಲಾಗಿದೆ.