ಬೆಂಗಳೂರು: ರಾಜಧಾನಿ ಬೆಂಗಳೂರಿನ ಟ್ರಾಫಿಕ್ ಗಳಲ್ಲಿ ಭಿಕ್ಷೆ ಬೇಡುತ್ತಾ ವಾಹನ ಸವಾರರಿಗೆ ಕಿರಿಕಿರಿಯುಂಟು ಮಾಡುವ ಭಿಕ್ಷುಕರಿಗೆ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.
ಇನ್ಮುಂದೆ ಟ್ರಾಫಿಕ್ ಸಿಗ್ನಲ್ ಗಳಲ್ಲಿ ಭಿಕ್ಷೆ ಬೇಡುವಂತಿಲ್ಲ. ಒಂದು ವೇಳೆ ಸಿಗ್ನಲ್ ಗಳಲ್ಲಿ ಭಿಕ್ಷೆ ಬೇಡುತ್ತಾ ಕಿರಿಕಿರುಯುಂಟು ಮಾಡಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಬಿಗ್ ನ್ಯೂಸ್: 8000 ಉಪನ್ಯಾಸಕರ ಹುದ್ದೆ ಮಂಜೂರಾತಿಗೆ ಮನವಿ
ಭಿಕ್ಷೆ ಬೇಡುವಾಗ ಹಣ ನೀಡದಿದ್ದರೆ ವಾಹನ ಸವಾರರ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದು, ಭಿಕ್ಷುಕರಿಂದ ಟ್ರಾಫಿಕ್ ಸಮಸ್ಯೆ ಇನ್ನಷ್ಟು ಹೆಚ್ಚುತ್ತಿದೆ. ಹೀಗಾಗಿ ಸಿಗ್ನಲ್ ಗಳಲ್ಲಿ ಭಿಕ್ಷೆ ಬೇಡುವುದನ್ನು ತಪ್ಪಿಸುವಂತೆ ಆಯುಕ್ತರು ಆಯಾ ಪೊಲೀಸ್ ಠಾಣಾ ವಿಭಾಗಗಳಿಗೆ ಸೂಚನೆ ನೀಡಿದ್ದಾರೆ.