ತುಮಕೂರು: ಹೈಕಮಾಂಡ್ ನೋಟೀಸ್ ಗೂ ಹೆದರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ. ಯಡಿಯೂರಪ್ಪನವರಿಗೆ ಮೀಸಲಾತಿ ನೀಡಲು ಇಷ್ಟವಿಲ್ಲ. ಇಷ್ಟವಿದ್ದಿದ್ದರೆ ಹೀಗೆ ವಿಳಂಬ ಮಾಡುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ತುಮಕೂರಿನಲ್ಲಿ ಮಾತನಾಡಿದ ಯತ್ನಾಳ್, ಇವತ್ತಿನವರೆಗೂ ಆಯೋಗಕ್ಕೆ ನೀಡಿರುವ ಪತ್ರ ನೋಟೀಫಿಕೇಷನ್ ಆಗಿಲ್ಲ. ಸಿಎಂ ಅವರಿಗೆ ಮನಸ್ಸಿದ್ದರೆ ಪಂಚಮಸಾಲಿ, ವೀರಶೈವ ಲಿಂಗಾಯತ ಮೀಸಲಾತಿ ನೀಡಬಹುದಿತ್ತು. ಈ ಅಧಿಕಾರ ಸಿಎಂ ಕೈಲೇ ಇರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಅವರಿಗೆ ಇಷ್ಟವಿಲ್ಲ ಎಂದರು.
ಪ್ರೇಮಿಗಳ ದಿನವೇ ಎಸ್.ಎಂ. ಕೃಷ್ಣ ಮೊಮ್ಮಗನೊಂದಿಗೆ ಡಿಕೆಶಿ ಪುತ್ರಿ ಅದ್ಧೂರಿ ಮದುವೆ, ಗಣ್ಯರು ಭಾಗಿ
ವೀರಶೈವ-ಲಿಂಗಾಯತ ಸಮುದಾಯಗಳನ್ನು ಯಡಿಯೂರಪ್ಪ ತಮ್ಮ ರಾಜಕೀಯ ಅಸ್ತ್ರಕ್ಕಾಗಿ, ಕೇವಲ ತಮ್ಮ ಮಗನ ಭವಿಷ್ಯಕ್ಕಾಗಿ, ತಮ್ಮ ಕುರ್ಚಿಗಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಗುಡುಗಿದ್ದಾರೆ.