alex Certify ಸಿಡಿ ಪ್ರಕರಣ; ಎಸ್ ಐ ಟಿ ತನಿಖೆ ತಿಪ್ಪೆ ಸಾರಿಸೋ ಕೆಲಸ – ಹೆಚ್.ಡಿ.ಕುಮಾರಸ್ವಾಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಡಿ ಪ್ರಕರಣ; ಎಸ್ ಐ ಟಿ ತನಿಖೆ ತಿಪ್ಪೆ ಸಾರಿಸೋ ಕೆಲಸ – ಹೆಚ್.ಡಿ.ಕುಮಾರಸ್ವಾಮಿ

ಮೈಸೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ ಎಸ್ ಐ ಟಿ ತನಿಖೆಗೆ ವಹಿಸಿರುವುದು ತಿಪ್ಪೇ ಸಾರಿಸೋ ಕೆಲಸ. ಎಸ್ ಐ ಟಿ ತನಿಖೆ ನಡೆಸುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಎಸ್ ಐ ಟಿ ತನಿಖೆಯಲ್ಲಿ ಜೈಲಿಗೆ ಹೋದ ಉದಾಹರಣೆಗಳಿಲ್ಲ. ಇದು ಕೂಡ ನಕಲಿ ಸಿಡಿ ಎನ್ನುವ ವರದಿ ಬರುತ್ತದೆ. ಇಲ್ಲಿಯವರೆಗೆ ನಡೆದ ಇಂತಹ ಅದೆಷ್ಟೋ ತನಿಖೆಯಂತೆ ಇದೂ ಕೂಡ ಮೂಲೆ ಸೇರಲಿದೆ ಎಂದು ಎಸ್ ಐ ಟಿ ತನಿಖೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮೇಲೆ ದಾಳಿಯೇ ನಡೆದಿಲ್ಲ – ಪ್ರತ್ಯಕ್ಷದರ್ಶಿ ಹೇಳಿದ್ದೇನು…..?

ಎಸ್ ಐ ಟಿ ತನಿಖೆ ಕಾಟಾಚಾರಕ್ಕಾಗಿ ನಡೆಸುವ ತನಿಖೆಯಾಗಿದೆ. ರಾಜಕಾರಣದಲ್ಲಿ ನೇರವಾಗಿ ಯುದ್ಧ ಮಾಡೋಣ. ಇಂತಹ ಆರೋಪ ಹೊತ್ತುಕೊಂಡಿರುವಾಗ ಪ್ರತಿದಿನ ಜನರ ಮುಂದೆ ಹೋಗಿ ನಿಂತು ಜನರಿಗೆ ಏನೆಂದು ಉತ್ತರ ಕೊಡುತ್ತೀರಿ? ರಾಜಕಾರಣವನ್ನು ಈ ಮಟ್ಟಕ್ಕೆ ತೆಗೆದುಕೊಂಡು ಹೋಗುವುದು ಸರಿಯಲ್ಲ ಎಂದು ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...