ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಹುಣಸೂರು ಕ್ಷೇತ್ರದಿಂದ ಕಣಕ್ಕಿಳಿದಿದ್ದ ಹೆಚ್. ವಿಶ್ವನಾಥ್ ಪರಾಭವಗೊಂಡಿದ್ದರು. ಹೀಗಾಗಿ ಯಡಿಯೂರಪ್ಪನವರ ಸಂಪುಟದಲ್ಲಿ ಸಚಿವರಾಗುವ ಅವರ ಕನಸು ಈಡೇರಿರಲಿಲ್ಲ.
ಆ ನಂತರ ವಿಧಾನಪರಿಷತ್ ಟಿಕೆಟ್ ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ವಿಶ್ವನಾಥ್ ಮನವಿ ಮಾಡಿಕೊಂಡಿದ್ದರು. ಆದರೆ ಬಿಜೆಪಿ ಹೈಕಮಾಂಡ್ ವಿಶ್ವನಾಥ್ ಅವರಿಗೆ ಅವಕಾಶ ನೀಡಿಲ್ಲ.
ವಿಧಾನ ಪರಿಷತ್ ಗೆ ಐವರನ್ನು ನಾಮ ನಿರ್ದೇಶನ ಮಾಡಬಹುದಾಗಿದ್ದು, ಹೀಗಾಗಿ ವಿಶ್ವನಾಥ್, ಸಾಹಿತ್ಯ ಕ್ಷೇತ್ರದಿಂದ ತಮ್ಮನ್ನು ಆಯ್ಕೆ ಮಾಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ದುಂಬಾಲು ಬಿದ್ದಿದ್ದಾರೆಂದು ಹೇಳಲಾಗಿದೆ.
ನಾನೊಬ್ಬ ಬರಹಗಾರನಾಗಿದ್ದು, ಈ ಹಿನ್ನೆಲೆಯಲ್ಲಿ ಸಾಹಿತ್ಯ ಕ್ಷೇತ್ರದಿಂದ ತಮ್ಮನ್ನು ನಾಮನಿರ್ದೇಶನ ಮಾಡುವಂತೆ ಯಡಿಯೂರಪ್ಪನವರಿಗೆ ಮನವಿ ಮಾಡಿರುವುದಾಗಿ ಸ್ವತಃ ವಿಶ್ವನಾಥ್ ತಿಳಿಸಿದ್ದಾರೆ.