ಸಹಕಾರ ಸಂಸ್ಥೆಗಳ ಮೂಲಕ ವಿವಿಧ ಯೋಜನೆಗಳಡಿ ಸಾಲ ಪಡೆದಿದ್ದ ರೈತರು, ಕೊರೊನಾ ಕಾರಣಕ್ಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಈ ಹಿನ್ನೆಲೆಯಲ್ಲಿ ಸಕಾಲಕ್ಕೆ ಸಾಲ ಪಾವತಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸುಸ್ತಿಯಾಗುವ ಭೀತಿ ಎದುರಿಸುತ್ತಿದ್ದರು.
ಈ ಸಾಲ ಪಾವತಿಸುವ ಅವಧಿಯನ್ನು ರಾಜ್ಯ ಸರ್ಕಾರ ಈ ಮೊದಲು ಮಾರ್ಚ್ ನಿಂದ ಜೂನ್ ಅಂತ್ಯದವರೆಗೆ ವಿಸ್ತರಿಸಿತ್ತು. ಆದರೂ ಕೂಡ ಬಹಳಷ್ಟು ರೈತರಿಗೆ ಸಕಾಲಕ್ಕೆ ಸಾಲ ಪಾವತಿಸಲು ಸಾಧ್ಯವಾಗಿರಲಿಲ್ಲ. ಇದೀಗ ಮತ್ತೊಮ್ಮೆ ರೈತರ ನೆರವಿಗೆ ರಾಜ್ಯ ಸರ್ಕಾರ ಧಾವಿಸಿದೆ.
ಕೊರನಾ ವೈರಸ್ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿರುವ ಹಿನ್ನೆಲೆಯಲ್ಲಿ ಸಹಕಾರ ಸಂಸ್ಥೆಗಳಿಗೆ ಸಾಲ ಮರು ಪಾವತಿಸುವ ಅವಧಿಯನ್ನು ಇದೀಗ ಆಗಸ್ಟ್ ಅಂತ್ಯದವರೆಗೆ ವಿಸ್ತರಿಸಲಾಗಿದ್ದು, ಇದರಿಂದ ರೈತ ಸಮುದಾಯಕ್ಕೆ ಅನುಕೂಲಕರವಾಗಲಿದೆ.