ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಒಂದು ದಿನಕ್ಕೆ 9 ರಿಂದ 10 ಸಾವಿರದಷ್ಟು ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ.
ಸೋಂಕು ಹೆಚ್ಚಾಗುತ್ತಿರುವಂತಹ ಬೆನ್ನಲ್ಲೇ ಸರ್ಕಾರ ಕೂಡ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಭಾಗವಾಗಿ ಮಾಸ್ಕ್ ಹಾಕದೇ ಇರೋವ್ರಿಗೆ ದಂಡವನ್ನು ವಿಧಿಸಲಾಗುತ್ತಿದೆ. ಇದೀಗ ಈ ದಂಡದ ಪ್ರಮಾಣವನ್ನು ಹೆಚ್ಚು ಮಾಡಲಾಗಿತ್ತು.
ಹೌದು, ಮೊದಲು 200 ರೂಪಾಯಿ ಇದ್ದ ದಂಡವನ್ನು ಇದೀಗ ಒಂದು ಸಾವಿರ ರೂಪಾಯಿಗೆ ಏರಿಕೆ ಮಾಡಿ ಆದೇಶ ಹೊರಡಿಸಲಾಗಿತ್ತು. ದಂಡದ ಪ್ರಮಾಣದಲ್ಲಿ ಏರಿಕೆ ಕಂಡ ಬೆನ್ನಲ್ಲೇ ಸಾರ್ವಜನಿಕರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು. ಇಷ್ಟು ದಂಡ ಹೆಚ್ಚಾಗಿದ್ದು ಸರಿಯಲ್ಲ. ಕೈಯಲ್ಲಿ ಕೆಲಸವಿಲ್ಲದೆ ಪರದಾಡುವ ಸ್ಥಿತಿ ಇದ್ದಾಗ ಇಷ್ಟು ದಂಡ ಎಲ್ಲಿಂದ ಕಟ್ಟೋದು. ಈ ರೀತಿ ದಂಡ ಏರಿಕೆ ಮಾಡಿ ನಮ್ಮನ್ನು ಸುಲಿಗೆ ಮಾಡುವುದು ಬೇಡ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು.
ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಇದೀಗ ಅವರ ಆಕ್ರೋಶಕ್ಕೆ ಮಣಿದ ಸರ್ಕಾರ ದಂಡದ ಪ್ರಮಾಣ ಕಡಿಮೆ ಮಾಡಿದೆ. ಒಂದು ಸಾವಿರ ರೂಪಾಯಿ ಇದ್ದ ದಂಡವನ್ನು 250 ರೂಪಾಯಿಗೆ ಇಳಿಕೆ ಮಾಡಿದೆ. ಇನ್ನು ಹಳ್ಳಿ ಪ್ರದೇಶದಲ್ಲಿ ಮಾಸ್ಕ್ ಹಾಕದೇ ಇರೋವ್ರಿಗೆ 500 ದಂಡ ವಿಧಿಸಲಾಗಿತ್ತು. ಅದರ ಪ್ರಮಾಣ ಕೂಡ ಕಡಿಮೆ ಮಾಡಲಾಗಿದ್ದು, 100 ರೂಪಾಯಿಗೆ ಇಳಿಕೆ ಮಾಡಿ ಆದೇಶ ಹೊರಡಿಸಿದೆ.