alex Certify ಸಾರ್ವಜನಿಕರೇ ಗಮನಿಸಿ: ಜನವರಿ 1 ರಿಂದ ಮುಖ್ಯಮಂತ್ರಿ ಸಚಿವಾಲಯದಲ್ಲಿ ಅಹವಾಲು ಸ್ವೀಕಾರಕ್ಕೆ ಒಂದೇ ಇ-ಮೇಲ್ ಐಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರ್ವಜನಿಕರೇ ಗಮನಿಸಿ: ಜನವರಿ 1 ರಿಂದ ಮುಖ್ಯಮಂತ್ರಿ ಸಚಿವಾಲಯದಲ್ಲಿ ಅಹವಾಲು ಸ್ವೀಕಾರಕ್ಕೆ ಒಂದೇ ಇ-ಮೇಲ್ ಐಡಿ

ಬೆಂಗಳೂರು: ಇನ್ಮುಂದೆ ಸಾರ್ವಜನಿಕರು ಮುಖ್ಯಮಂತ್ರಿಗಳಿಗೆ ಅಹವಾಲು ಸಲ್ಲಿಕೆ ಮಾಡಲು ಹಾಗೂ ಸಂವಹನಕ್ಕಾಗಿ ಒಂದೇ ಇ-ಮೇಲ್ ಐಡಿಯನ್ನು ಬಳಕೆ ಮಾಡಲಾಗುತ್ತದೆ. 2021ರ ಜನವರಿ 1ರಿಂದ cm.kar@nic.in ಇ-ಮೇಲ್ ಐಡಿಯನ್ನು ಮಾತ್ರ ಬಳಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಚಿವಾಲಯದ ತಿಳಿಸಿದೆ.

ಪ್ರಸ್ತುತ ಮುಖ್ಯಮಂತ್ರಿಗಳ ಸಚಿವಾಲಯವು 3 ಸಕ್ರಿಯ ಇ-ಮೇಲ್ ವಿಳಾಸಗಳನ್ನು ಹೊಂದಿದ್ದು, ಇದರಿಂದ ಅಹವಾಲು ಪುನರಾವರ್ತನೆಯಾಗುತ್ತಿದೆ ಹಾಗೂ ಅನಗತ್ಯ ಗೊಂದಲ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಹವಾಲು ಸಲ್ಲಿಕೆ ಮತ್ತು ನಿರ್ವಹಣೆಯನ್ನು ಸರಳಗೊಳಿಸಲು ಏಕ ವಿಳಾಸವನ್ನು ಬಳಕೆ ಮಾಡಲು ನಿರ್ಧರಿಸಲಾಗಿದೆ.

ಸಾರ್ವಜನಿಕರು ಮುಂದಿನ ದಿನಗಳಲ್ಲಿ ತಮ್ಮ ಅಹವಾಲು ಮತ್ತು ಇತರ ಸಂವಹನವನ್ನು cm.kar@nic.in ಮೇಲ್ ಐಡಿ ಮೂಲಕವೇ ಮಾಡುವಂತೆ ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...