ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರುಗಳಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ಈ ಶಿಕ್ಷಕರ ವೇತನಕ್ಕಾಗಿ ಶಿಕ್ಷಣ ಇಲಾಖೆ ಮುಂಗಡ ಮೂರು ತಿಂಗಳ ಅನುದಾನ ಬಿಡುಗಡೆ ಮಾಡಿದೆ.
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರುಗಳ ವೇತನಕ್ಕೆ 2020ರ ಸೆಪ್ಟೆಂಬರ್ ನಿಂದ ನವೆಂಬರ್ ವರೆಗೆ ಒಟ್ಟು 374.73 ಕೋಟಿ ರೂಪಾಯಿಗಳ ಅನುದಾನವನ್ನು ಈಗ ಬಿಡುಗಡೆ ಮಾಡಲಾಗಿದೆ.
ಈ ಅನುದಾನವನ್ನು ವೇತನಕ್ಕೆ ಮಾತ್ರ ಬಳಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿಗಳು ಸೂಚಿಸಿದ್ದು, ಜಿಲ್ಲಾವಾರು, ತಾಲೂಕುವಾರು ಹಂಚಿಕೆ ಮಾಡಿ ಮರು ಬಿಡುಗಡೆ ಮಾಡಲು ಮತ್ತು ಖಜಾನೆಯಲ್ಲಿ ಅಪ್ಲೋಡ್ ಮಾಡಲು ರಾಜ್ಯ ಯೋಜನಾ ನಿರ್ದೇಶಕರಿಗೆ ಅನುಮತಿ ನೀಡಲಾಗಿದೆ.