ಬೆಂಗಳೂರು: ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ಮನೆಗೆ ತೆರಳಿ ಕೊರೊನಾ ಲಸಿಕೆ ನೀಡಿದ್ದ ಹಿರೇಕೆರೂರು ವೈದ್ಯಾಧಿಕಾರಿಯನ್ನು ಅಮಾನತು ಮಾಡಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಕೆ.ವಿ.ತ್ರಿಲೋಕಚಂದ್ರ ಆದೇಶ ಹೊರಡಿಸಿದ್ದಾರೆ.
ಮಾರ್ಚ್ 2ರಂದು ಸಚಿವ ಬಿ.ಸಿ.ಪಾಟೀಲ್ ಹಾಗೂ ವನಜಾ ಪಾಟೀಲ್ ಅವರಿಗೆ ಕೋವಿಡ್ ನಿಯಮ ಉಲ್ಲಂಘಿಸಿ ಸಚಿವರ ಮನೆಗೆ ತೆರಳಿ ವೈದ್ಯಾಧಿಕಾರಿ ಮಕಾಂದಾರ್ ಲಸಿಕೆ ನೀಡಿದ್ದರು. ಸಚಿವರಾದವರು ಆಸ್ಪತ್ರೆಗೆ ತೆರಳಿ ಕೋವಿಡ್ ಲಸಿಕೆ ಪಡೆದು ಜನರಿಗೆ ಮಾದರಿಯಾಗುವುದನ್ನು ಬಿಟ್ಟು, ವೈದಾಧಿಕಾರಿಯನ್ನು ಮನೆಗೆ ಕರೆಸಿಕೊಂಡು ಲಸಿಕೆ ಪಡೆದಿದ್ದು ಸರ್ಕಾರದ ಹಾಗೂ ರಾಜ್ಯದ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರ ಎಡವಟ್ಟಿಗೆ ಇದೀಗ ವೈದ್ಯಾಧಿಕಾರಿ ಸಸ್ಪೆಂಡ್ ಆಗಿದ್ದಾರೆ.
ಭಾರತದಲ್ಲಿ ಕೊರೊನಾ ಅಟ್ಟಹಾಸ – 24 ಗಂಟೆಯಲ್ಲಿ 81,466 ಜನರಲ್ಲಿ ಸೋಂಕು ಪತ್ತೆ
ಅಂದು ಸಚಿವರ ಬುಲಾವ್ ಮೇರೆಗೆ ಅವರ ಮನೆಗೆ ತೆರಳಿ ಕೋವಿಡ್ ಲಸಿಕೆ ನೀಡಿದ್ದ ಹಿರೇಕೆರೂರು ಟಿಹೆಚ್ಒ ಡಾ.Z.R.ಮಕಾಂದಾರ್ ಅವರಿಗೆ ಕಳೆದ ತಿಂಗಳು ಕಾರಣ ಕೇಳಿ ನೊಟೀಸ್ ನೀಡಲಾಗಿತ್ತು. ಇದೀಗ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.