ನವರಾತ್ರಿ ಹಬ್ಬದ ಸಂಭ್ರಮ ಆರಂಭವಾಗಿದೆ. ದೇಶಾದ್ಯಂತ ದೇವಿಯ ದೇಗುಲಗಳು ಅಲಂಕೃತಗೊಂಡು ಭಕ್ತರ ದರ್ಶನಕ್ಕಾಗಿ ಕಾಯುತ್ತಿವೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಿಂದ ಕೇವಲ 35 ಕಿಲೋಮೀಟರ್ ದೂರದಲ್ಲಿರುವ ಶ್ರೀ ಕ್ಷೇತ್ರ ಕಮಲಶಿಲೆಯಲ್ಲೂ ನವರಾತ್ರಿ ಸಂಭ್ರಮ ಜೋರಾಗಿದೆ.
ಲಿಂಗ ರೂಪದಲ್ಲಿ ದೇವಿಯನ್ನ ಆರಾಧಿಸೋ ಏಕೈಕ ಸ್ಥಾನವಾಗಿರೋ ಕಮಲ ಶಿಲೆಗೆ ರಾಜ್ಯ ಮಾತ್ರವಲ್ಲದೇ ನೆರೆ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ಅದೇ ರೀತಿ ತಮಿಳುನಾಡಿನಲ್ಲಿ ಆಡಿಟರ್ ಆಗಿರುವ ರಾಜಶೇಖರ್ ಎಂಬವರೂ ಕೂಡ ದೇಗುಲಕ್ಕೆ ಭೇಟಿ ನೀಡಿ ಅಮ್ಮನ ಸೇವೆ ಮಾಡಿದ್ದಾರೆ. ಬಿಎಂಡಬ್ಲೂ ನಂತಹ ಐಶಾರಾಮಿ ಕಾರು ಹೊಂದಿರುವ ಈ ಶ್ರೀಮಂತ ವ್ಯಕ್ತಿ, ಬ್ರಾಹ್ಮಿ ಅನ್ನ ಕುಟೀರದಲ್ಲಿ ಅನ್ನ ಪ್ರಸಾದ ಮುಗಿದ ಬಳಿಕ ಎಲೆ ತೆಗೆಯೋ ಮೂಲಕ ಸರಳತೆ ಮೆರೆದಿದ್ದಾರೆ. ಪ್ರತಿ ವರ್ಷ ನವರಾತ್ರಿಯ 9 ದಿನ ರಾಜಶೇಖರ್ ಈ ಸೇವೆಯನ್ನ ಮಾಡ್ತಾರಂತೆ.
ಸ್ಥಳೀಯರಾದ ಉಮೇಶ್ ಶೆಟ್ಟಿ ಎಂಬವರು ಫೇಸ್ಬುಕ್ನಲ್ಲಿ ಈ ವಿಚಾರವನ್ನ ಹಂಚಿಕೊಂಡಿದ್ದಾರೆ. ಪ್ರತಿದಿನದಂತೆ ದೇವಸ್ಥಾನಕ್ಕೆ ಬಂದ ಉಮೇಶ್ ದೇಗುಲದ ಮುಂದೆ ನಿಂತಿದ್ದ ಐಷಾರಾಮಿ ಕಾರನ್ನ ಕಂಡಿದ್ದಾರೆ, ಬಳಿಕ ಕಾರಿನ ಯಜಮಾನರ ಬಗ್ಗೆ ವಿಚಾರಿಸಿದಾಗ ಅವರ ಸರಳತೆ ಕಂಡು ಉಮೇಶ್ ಖುಷಿ ಆಗಿದ್ದಾರೆ.