
ದಂಡು ಪಾಳ್ಯ ಗ್ಯಾಂಗ್ ಬಗ್ಗೆ ಯಾರಿಗೆ ಗೊತ್ತಿಲ್ಲ. ಮೊದ ಮೊದಲು ಈ ಗುಂಪಿನ ಬಗ್ಗೆ ಯಾರಿಗೂ ತಿಳಿದೇ ಇದ್ದರೂ ಸಿನಿಮಾ ಬಂದ ನಂತರ ಇಡೀ ಜನತೆಗೆ ಈ ಬಗ್ಗೆ ಗೊತ್ತಾಗಿದ್ದಂತೂ ಸತ್ಯ. ಈ ಗ್ಯಾಂಗ್ ಮಾಡುತ್ತಿದ್ದ ಕೊಲೆಗಳನ್ನು ಪರದೆಯ ಮೇಲೆ ನೋಡಿದರೆ ಎಂಥವರೂ ಬೆಚ್ಚಿ ಬೀಳುತ್ತಿದ್ದರು. ಇದೀಗ ಇಂತಹದ್ದೇ ಕೊಲೆಯೊಂದು ಶ್ರೀರಂಗಪಟ್ಟಣದಲ್ಲಿ ನಡೆದಿದೆ.
ಹೌದು, ಶ್ರೀರಂಗಪಟ್ಟಣದ ಲಾಡ್ಜ್ ಒಂದರಲ್ಲಿ ಮಹಿಳೆಯೊಬ್ಬರ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಮಹಿಳೆ ಬಟ್ಟೆಯಿಲ್ಲದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಿನ್ನೆ ಬೆಳಗ್ಗೆ ಜೋಡಿಯೊಂದು ಲಾಡ್ಜ್‌ಗೆ ಬಂದು ರೂಂ ತೆಗೆದುಕೊಂಡಿದ್ದಾರೆ. ನಂತರ ಈ ಇಬ್ಬರ ನಡುವೆ ಏನಾಗಿದೆಯೋ ಗೊತ್ತಿಲ್ಲ. ರಾತ್ರಿಯ ವೇಳೆ ಮಹಿಳೆಯನ್ನು ಕೊಲೆ ಮಾಡಿ, ಪರಾರಿಯಾಗಿದ್ದಾನೆ.
ಇನ್ನು ರೂಂನಿಂದ ರಕ್ತ ಹೊರಬರುವುದನ್ನು ಕಂಡ ನಂತರ ಘಟನೆ ಬಗ್ಗೆ ಗೊತ್ತಾಗಿದೆ. ಕೊಲೆಯಾದ ಮಹಿಳೆ ಯಾರೆಂದು ತಿಳಿದಿಲ್ಲ. ಈ ಘಟನೆ ಸಂಬಂಧ ಶ್ರೀರಂಗಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.