ಹಾಸನ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಓರ್ವ ಸ್ಯಾಡಿಸ್ಟ್. ಕೇವಲ ಸುಳ್ಳು ಹೇಳಿಕೆಗಳನ್ನು ನೀಡುತ್ತಿರುತ್ತಾರೆ ಎಂದು ಕ್ಯಾಮ್ಸ್-ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಯ ಪ್ರಧಾನಕಾರ್ಯದರ್ಶಿ ಶಶಿಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಖಾಸಗಿ ಶಾಲೆಗಳಿಗೆ 2 ವರ್ಷಗಳಿಂದ ಯಾವುದೇ ಆರ್ ಟಿ ಇ ಶುಲ್ಕ ಪಾವತಿ ಮಾಡಿಲ್ಲ. ಆದರೆ ಶಿಕ್ಷಣ ಸಚಿವರು ಆರ್ ಟಿ ಇ ಶುಲ್ಕ ಪಾವತಿ ಮಾಡಲಾಗಿದೆ ಎಂದು ಹೇಳಿದ್ದರು. ಸಚಿವರ ಹೇಳಿಕೆಯಿಂದಾಗಿ ಹಲವು ಪೋಷಕರು ಶಾಲೆಯ ಶುಲ್ಕವನ್ನೇ ಪಾವತಿಸಿಲ್ಲ. ಶಿಕ್ಷಣ ಸಚಿವರ ಹೇಳಿಕೆ ಗೊಂದಲಗಳನ್ನುಂಟು ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಕೊರೊನಾ, ಲಾಕ್ ಡೌನ್ ನಿಂದಾಗಿ ಖಾಸಗಿ ಶಾಲೆಗಳ ಶೇ.50ರಷ್ಟು ಶಿಕ್ಷಕರು ಕೆಲಸ ಕಳೆದುಕೊಂಡಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ತೊಂದರೆ ಕೊಡಲೇಬೇಕು ಎಂಬ ಸ್ಯಾಡಿಸ್ಟ್ ಮನೋಭಾವವನ್ನು ಶಿಕ್ಷಣ ಸಚಿವರು ಹೊಂದಿದ್ದಾರೆ. ಶಿಕ್ಷಣ ಸಚಿವರು ಕೇವಲ ಫೇಸ್ ಬುಕ್, ಟ್ವಿಟರ್ ನಲ್ಲಿ ಮಾತ್ರ ಸಿಗುತ್ತಾರೆ ನಮ್ಮ ಸಂಕಷ್ಟ ಕೇಳುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.