ಕೊರೊನಾದಿಂದಾಗಿ ಶಾಲಾ ಕಾಲೇಜುಗಳೂ ತೆರೆದಿಲ್ಲ. ಇತ್ತೀಚೆಗೆ ಶಾಲೆ ತೆರೆಯುವಿಕೆ ವಿಚಾರವಾಗಿ ಕೇಂದ್ರ ಸರ್ಕಾರ ಆಯಾಯ ರಾಜ್ಯಗಳ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿದ್ದರೂ, ಶಾಲೆಗೆ ಮಕ್ಕಳನ್ನು ಕಳಿಸುವುದು ಹೇಗೆ ಎನ್ನುತ್ತಿದ್ದಾರೆ ಅನೇಕ ಪೋಷಕರು.
ಅದರಲ್ಲೂ ಇತ್ತಿಚಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದರ ಮಧ್ಯೆ ಶಾಲೆ ಓಪನ್ ಆದರೆ ಮಕ್ಕಳನ್ನು ಶಾಲೆಗೆ ಕಳಿಸಿ ಸೋಕು ತಗುಲಿದರೆ ಹೇಗೆ ಎಂಬ ಆತಂಕ ಪೋಷಕರಲ್ಲಿಯೂ ಇದೆ.
ಈ ಗೊಂದಲಗಳ ನಡುವೆಯೇ ಶಿಕ್ಷಣ ಇಲಾಖೆ ಶಿಕ್ಷಕರು, ಶಿಕ್ಷಣ ತಜ್ಞರು, ಜನ ಪ್ರತಿನಿಧಿಗಳು ಹಾಗೂ ಪೋಷಕರಿಂದ ಅಭಿಪ್ರಾಯ ಸಂಗ್ರಹ ಮಾಡುತ್ತಿದೆ. ಇದರಲ್ಲಿ ಒಂದಿಷ್ಟು ಜನ ಪೋಷಕರು ಶಾಲೆ ತೆರೆಯುವುದು ಉತ್ತಮ ಎಂದು ಹೇಳುತ್ತಿದ್ದಾರೆ. ಮತ್ತೊಂದಿಷ್ಟು ಜನ ಶಾಲೆ ತೆರೆಯುವುದು ಬೇಡ, ಮಕ್ಕಳ ಆರೋಗ್ಯ ಮುಖ್ಯ ಎನ್ನುತ್ತಿದ್ದಾರೆ. ಇದೀಗ ಈ ವಿಚಾರವಾಗಿ ಶಿಕ್ಷಣ ತಜ್ಞರೂ ಕೂಡ ಶಾಲೆ ತೆರೆಯುವ ಬಗ್ಗೆ ಅಭಿಪ್ರಾಯ ಹೇಳಿದ್ದಾರೆ.
ಮಕ್ಕಳ ಆರೋಗ್ಯದಂತೆಯೇ ಅವರ ಕಲಿಕೆ ಕೂಡ ಮುಖ್ಯವಾಗಿರೋದ್ರಿಂದ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಶಾಲೆ ತೆರೆಯುವುದು ಉತ್ತಮ ಎಂದು ಹೇಳಿದ್ದಾರೆ. ತಜ್ಞರ ಅಭಿಪ್ರಾಯ ಏನೋ ಶಾಲೆ ತೆರೆಯುವುದೇ ಸೂಕ್ತ ಎಂಬುದಿರುವಾಗ ಪೋಷಕರು ಇದಕ್ಕೆ ಒಪ್ಪುತ್ತಾರಾ ಎಂಬುದು ಇಲ್ಲಿ ಮುಖ್ಯವಾಗಿದೆ.