ಇಷ್ಟು ದಿನ ಬಿಸಿಯೂಟದಲ್ಲಿ ಪೌಷ್ಟಿಕಾಂಶ ಕೊರತೆ ಕಂಡು ಬರುತ್ತಿದೆ ಎಂಬ ಆರೋಪಗಳ ಜೊತೆಗೆ ಸರ್ಕಾರ ಬಿಸಿಯೂಟಕ್ಕಾಗಿ ನೀಡುವ ಅನುದಾನದಲ್ಲಿ ಮಕ್ಕಳಿಗೆ ಉತ್ತಮ ಪೌಷ್ಟಿಕಾಂಶ ಆಹಾರ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಹೊಸದೊಂದು ಯೋಜನೆ ಜಾರಿಗೆ ತರುತ್ತಿದೆ ಸರ್ಕಾರ.
ಹೌದು, ಶಾಲೆ ಹಾಗು ಅಂಗನವಾಡಿ ಆವರಣದಲ್ಲೇ ಕಾಯಿಪಲ್ಯ ಉತ್ಪಾದನೆ ಯೋಜನೆ ಅಂದರೆ ನ್ಯೂಟ್ರಿ ಗಾರ್ಡನ್ ಯೋಜನೆ ಜಾರಿಗೆ ತರಲು ಸರ್ಕಾರ ಆದೇಶ ನೀಡಿದೆ. ಈ ನ್ಯೂಟ್ರಿ ಗಾರ್ಡನ್‌ನಲ್ಲಿ ಪೌಷ್ಟಿಕಾಂಶ ಉಳ್ಳ ತರಕಾರಿ, ಹಣ್ಣು ಬೆಳೆಸಬೇಕು. ಹೀಗೆ ಬೆಳೆಸಿ ಆಹಾರಕ್ಕೆ ಬಳಸೋದ್ರಿಂದ ಉತ್ತಮ ಪೌಷ್ಠಿಕಾಂಶದ ಜೊತೆಗೆ ಕಡಿಮೆ ಖರ್ಚು ಆಗುತ್ತದೆ.
ಪ್ರತಿ ಗಾರ್ಡನ್‌ಗೆ 5180 ರೂಪಾಯಿಯನ್ನು ನೀಡಲಾಗುತ್ತಿದೆ. ಇನ್ನು ಉಳಿದ ಖರ್ಚು ವೆಚ್ಚವನ್ನು ಆಯಾ ಗ್ರಾಮ ಪಂಚಾಯ್ತಿಗಳು ನರೇಗಾ ಯೋಜನೆಯಡಿ ನೀಡಬೇಕು. ಒಟ್ನಲ್ಲಿ ಹೊಸ ಯೋಜನೆಗೇನೋ ಸರ್ಕಾರ ಕೈ ಹಾಕಿದೆ. ಆದರೆ ಅದರ ನಿರ್ವಹಣೆಯನ್ನು ಆಯಾ ಗ್ರಾಮ ಪಂಚಾಯ್ತಿಗಳು, ಅಂಗನವಾಡಿಗಳು, ಶಾಲೆಗಳು ಸರಿಯಾಗಿ ಮಾಡಬೇಕಾಗಿದೆ.