ಬೆಂಗಳೂರು: ಅ.15ರಿಂದ ಶಾಲೆ-ಕಾಲೇಜುಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಲೆ-ಕಾಲೇಜುಗಳು ಆರಂಭವಾಗಲಿದೆಯೇ ಎಂಬ ಗೊಂದಲ ಮತ್ತೆ ಆರಂಭವಾಗಿದೆ.
ಅ.15 ರಿಂದ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಾಲೆ ತೆರೆಯಬಹುದು. ಹಾಜರಾತಿ ಕಡ್ಡಾಯವಲ್ಲ, ಪೋಷಕರ ಅನುಮತಿ ಇದ್ದರೆ ಮಾತ್ರ ಮಕ್ಕಳು ಶಾಲೆಗೆ ಬರಬಹುದು. ರಾಜ್ಯಗಳು ಆಯಾ ಶಿಕ್ಷಣ ಇಲಾಖೆಗಳ ಜೊತೆ ನಿರ್ಧಾರ ಕೈಗೊಳ್ಳುವಂತೆ ತಿಳಿಸಿದೆ.
ಕೇಂದ್ರ ಸರ್ಕಾರದ ಅನುಮತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ನಡೆ ಕುತೂಹಲ ಮೂಡಿಸಿದೆ. ಆದರೆ ಡೆಡ್ಲಿ ಕೊರೊನಾ ಸೋಂಕು ಅಬ್ಬರದ ನಡುವೆಯೂ ಶಾಲೆಗಳನ್ನು ತೆರೆದರೆ ಮಕ್ಕಳ ಗತಿಯೇನು ಎಂಬುದು ಆತಂಕಕ್ಕೆ ಕಾರಣವಾಗಿದೆ.