ಇಂದು ಕರಾಟೆ ಕಿಂಗ್ ಶಂಕರ್ ನಾಗ್ ಅವರನ್ನು ಕಳೆದುಕೊಂಡ ಕರಾಳ ದಿನ. ಖ್ಯಾತ ನಟ ಶಂಕರ್ ನಾಗ್ 1990 ಸೆಪ್ಟೆಂಬರ್ 30 ರಂದು ಚಿಕ್ಕ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ಇಂದು ಅವರ ಪುಣ್ಯ ಸ್ಮರಣೆಯಾಗಿದ್ದು, ಬಿ.ಸಿ. ಪಾಟೀಲ್ ತಮ್ಮ ಟ್ವಿಟ್ಟರ್ ನಲ್ಲಿ ಶಂಕರನಾಗ್ ಅವರಿಗೆ ನಮನ ಸಲ್ಲಿಸಿದ್ದಾರೆ.
35 ವರ್ಷ ಕಿರಿದಾದ ಬದುಕಿನ ಪಯಣದಲ್ಲಿ ನೂರಾರು ವರುಷ ನೆನೆಯುವಂತಹ ಕಾರ್ಯ ಸಾಧಿಸಿದ ಛಲಗಾರ. ನಾಯಕ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ಕನ್ನಡ ಚಿತ್ರರಂಗವನ್ನು ಬೆಳಗಿದ, ದಿವಂಗತ ಶ್ರೀ ಶಂಕರ್ ನಾಗ್ ಅವರ ಪುಣ್ಯ ಸ್ಮರಣೆಯಂದು ಕೋಟಿ ನಮನಗಳು ಎಂದು ಬಿ.ಸಿ. ಪಾಟೀಲ್ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.