ರಾಜ್ಯದಲ್ಲಿ ಕೊರೊನಾ ಆರ್ಭಟ ಜೋರಾಗಿದ್ದು, ದಾಖಲೆಯ ಸಂಖ್ಯೆಯಲ್ಲಿ ಸೋಂಕಿತರೂ ಪ್ರತಿನಿತ್ಯ ಪತ್ತೆಯಾಗುತ್ತಿದ್ದಾರೆ. ಹೀಗಾಗಿ ಇದರ ನಿಯಂತ್ರಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ರಾತ್ರಿ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂವನ್ನು ಜಾರಿಗೊಳಿಸಿದೆ.
ಶುಕ್ರವಾರ ರಾತ್ರಿ 9 ಗಂಟೆಯಿಂದ ಆರಂಭವಾದ ಮೊದಲ ವೀಕೆಂಡ್ ಕರ್ಫ್ಯೂ ಸೋಮವಾರ ಬೆಳಗ್ಗೆ 6 ಗಂಟೆಗೆ ಅಂತ್ಯವಾಗಿದೆ. ತಡವಾಗಿಯಾದರೂ ಎಚ್ಚೆತ್ತುಕೊಂಡಿರುವ ಸಾರ್ವಜನಿಕರು ವೀಕೆಂಡ್ ಕರ್ಫ್ಯೂನಲ್ಲಿ ಮನೆಯಲ್ಲೇ ಇರುವ ಮೂಲಕ ಸಂಪೂರ್ಣವಾಗಿ ಯಶಸ್ಸು ಮಾಡಿದ್ದಾರೆ.
ಇದರ ಮಧ್ಯೆಯೂ ಕೆಲವರು ಅನಗತ್ಯ ಓಡಾಟ ನಡೆಸಿದ್ದು ಪೊಲೀಸರು ಅವರಿಗೆ ಲಾಠಿ ರುಚಿ ತೋರಿಸಿದ್ದಾರೆ. ಈ ನಡುವೆ ಶಿವಮೊಗ್ಗದಲ್ಲಿ ಸ್ವಾರಸ್ಯಕರ ಪ್ರಕರಣವೊಂದು ನಡೆದಿದ್ದು, ಪೊಲೀಸರು ಕೆಲಕಾಲ ಗಾಬರಿಗೊಳಗಾದ ಘಟನೆ ನಡೆದಿದೆ.
ಬಿಗ್ ನ್ಯೂಸ್: ಉಚಿತವಾಗಿ ಲಸಿಕೆ ನೀಡಲು ರಾಜಸ್ಥಾನ, ಪಂಜಾಬ್ ನಿರ್ಧಾರ -ರಾಜ್ಯದಲ್ಲೂ ಇಂದು ತೀರ್ಮಾನ
ಅಮೀರ್ ಅಹ್ಮದ್ ಸರ್ಕಲ್ನಲ್ಲಿ ವ್ಯಕ್ತಿಯೊಬ್ಬರು ಬೈಕಿನಲ್ಲಿ ಬಂದಿದ್ದಾರೆ. ಅವರನ್ನು ತಡೆದು ಪೊಲೀಸರು ವಿಚಾರಿಸುತ್ತಿದ್ದ ವೇಳೆ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಎಂದು ತಿಳಿದುಬಂದಿದೆ. ಆಗ ಎಲ್ಲರೂ ಗಾಬರಿಗೊಳಗಾಗಿದ್ದಾರೆ.
ಅಸಲಿಗೆ ನಡೆದಿದ್ದೇನೆಂದರೆ ಈ ವ್ಯಕ್ತಿ ತಪಾಸಣೆಗೆಂದು ಮೆಗ್ಗಾನ್ ಆಸ್ಪತ್ರೆಗೆ ಹೋದಾಗ ಕೊರೊನಾ ಪಾಸಿಟಿವ್ ಬಂದಿದ್ದು, ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆ ಇರದ ಕಾರಣ ಮನೆಯಲ್ಲೇ ಐಸೋಲೇಶನ್ ಗೆ ಒಳಗಾಗಲು ಸೂಚಿಸಿದ್ದಾರೆ. ಹೀಗಾಗಿ ಆ ವ್ಯಕ್ತಿ ಆಸ್ಪತ್ರೆಯಿಂದ ಮನೆಗೆ ಹೋಗುವಾಗ ಪೊಲೀಸರು ತಡೆದಿದ್ದರು ಎನ್ನಲಾಗಿದೆ.