ಮೈಸೂರು: ರಾಜ್ಯದಲ್ಲಿ ವಿವಿಧ ಸಮುದಾಗಳು ಮೀಸಲಾತಿಗೆ ಆಗ್ರಹಿಸಿ ಹೋರಾಟಗಳನ್ನು ಆರಂಭಿಸಿದ್ದು, ಈ ವಿಚಾರವಾಗಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಎಲ್ಲರಿಗೂ ನ್ಯಾಯ ಒದಗಿಸುವುದು ಮುಖ್ಯಮಂತ್ರಿಯಾಗಿ ನನ್ನ ಕರ್ತವ್ಯ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಮೀಸಲಾತಿ ಹೋರಾಟ ವಿಚಾರ ತಾರಕಕ್ಕೇರಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸುತ್ತಾ, ಸವಾಲುಗಳು ಬಂದಾಗ ನನಗೆ ಖುಷಿಯಾಗುತ್ತದೆ. ಬಹಳ ಹುಮ್ಮಸ್ಸಿನಿಂದ ನಾನು ಸವಾಲುಗಳನ್ನು ಎದುರಿಸುತ್ತೇನೆ ಎಂದರು.
ಈ ಟ್ರ್ಯಾಕ್ಟರ್ ನಿಂದ ಹೆಚ್ಚಾಗಲಿದೆ ರೈತರ ಆದಾಯ
ಎಲ್ಲರೂ ತಮ್ಮ ತಮ್ಮ ಸಮುದಾಯಕ್ಕಾಗಿ ನ್ಯಾಯ ಕೇಳುತ್ತಿದ್ದಾರೆ. ಕೇಳುವುದು ಅವರ ಹಕ್ಕು, ಮೀಸಲಾತಿ ಬಗ್ಗೆ ಪರಿಶೀಲನೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.