ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಎ3 ಆರೋಪಿ ವಿರೇನ್ ಖನ್ನಾನನ್ನು ನಾರ್ಕೋ ಅನಾಲಿಸಿಸ್ ಟೆಸ್ಟ್ ಗೆ ಒಳಪಡಿಸಲು ನ್ಯಾಯಾಲಯ ಅನುಮತಿ ನೀಡಿದೆ.
ಡ್ರಗ್ಸ್ ನಂಟಿನ ಬಗ್ಗೆ ಬಾಯ್ಬಿಡದ ವಿರೇನ್ ಖನ್ನಾ, ಮೊಬೈಲ್ ಪಾಸ್ ವರ್ಡ್ ಕೂಡ ನೀಡದೇ ಪೊಲೀಸರನ್ನು ಸತಾಯಿಸುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ಆತನಿಂದ ಮಾಹಿತಿ ಕಲೆ ಹಾಕಲು ನಾರ್ಕೋ ಟೆಸ್ಟ್ ಗೆ ಒಳಪಡಿಸಲು ಅನುಮತಿ ನೀಡುವಂತೆ ಸಿಸಿಬಿ ಪೊಲೀಸರು, ಸಿಸಿಹೆಚ್ 33 ಕೋರ್ಟ್ ಗೆ ಮನವಿ ಮಾಡಿದ್ದರು.
ಇದೀಗ ವಿರೇನ್ ಖನ್ನಾನನ್ನು ನಾರ್ಕೋ ಟೆಸ್ಟ್ ಗೆ ಒಳಪಡಿಸಲು ಕೋರ್ಟ್ ಅನುಮತಿ ನೀಡಿದ್ದು, ನಾರ್ಕೋ ಟೆಸ್ಟ್ ಗಾಗಿ ವಿರೇನ್ ಖನ್ನಾನನ್ನು ಅಹಮದಾಬಾದ್ ಗೆ ಕರೆದೊಯ್ಯಲು ಸಿಸಿಬಿ ಸಿದ್ದತೆ ನಡೆಸಿದೆ. ಆದರೆ ಈ ಪರೀಕ್ಷೆಗೆ ಆರೋಪಿ ವಿರೇನ್ ಖನ್ನಾ ಅನುಮತಿ ಅಗತ್ಯ ಎನ್ನಲಾಗಿದೆ.