ವಿಮಾನ ಪ್ರಯಾಣಿಕನೊಬ್ಬ ಬರೋಬ್ಬರಿ 13.16 ಲಕ್ಷ ರೂ. ಮೌಲ್ಯದ ಚಿನ್ನವನ್ನು ಸಾಗಿಸುತ್ತಿದ್ದ ವೇಳೆ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಸ್ಪೈಸ್ ಜೆಟ್ ವಿಮಾನದ ಮೂಲಕ ಆಗಮಿಸಿದ್ದ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಲಾಸ್ ನಗರ ನಿವಾಸಿ ವಿನೇಶ್ ರಾಜು ಅಡ್ವಾಣಿ ಬಂಧಿತ ಆರೋಪಿಯಾಗಿದ್ದಾನೆ.
ಟಿಕೆಟ್ ದರ ಹೆಚ್ಚಳ ಬಿಸಿ: ಕನಿಷ್ಠ ದರ ಶೇಕಡ 5 ರಷ್ಟು ಹೆಚ್ಚಳ ಮಾಡಿ ವಿಮಾನ ಪ್ರಯಾಣಿಕರಿಗೆ ಸರ್ಕಾರದಿಂದ ಬಿಗ್ ಶಾಕ್
ಈತ ಚಿನ್ನವನ್ನು ಪುಡಿ ಮಾಡಿ ಆಂಟಿ ನೊಂದಿಗೆ ಮಿಕ್ಸ್ ಮಾಡಿದ ಬಳಿಕ ಅದನ್ನು ತನ್ನ ಗುದದ್ವಾರದಲ್ಲಿ ಇಟ್ಟುಕೊಂಡಿದ್ದನೆಂದು ಹೇಳಲಾಗಿದೆ. ಅಲ್ಲದೆ ರಿಂಗ್, ಅಂಗಿಯ ಗುಂಡಿ ಮೂಲಕವೂ ಅಕ್ರಮವಾಗಿ ಚಿನ್ನ ತರುತ್ತಿದ್ದ ಎನ್ನಲಾಗಿದೆ.