alex Certify ವಿದ್ಯುತ್ ಪ್ರವಹಿಸಿ ಅಸ್ವಸ್ಥ: ಚಿಕಿತ್ಸೆ ನೀಡದೆ ಹೊರನಡೆದ ವೈದ್ಯ – ನರಳಿ ನರಳಿ ಪ್ರಾಣಬಿಟ್ಟ ಬಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯುತ್ ಪ್ರವಹಿಸಿ ಅಸ್ವಸ್ಥ: ಚಿಕಿತ್ಸೆ ನೀಡದೆ ಹೊರನಡೆದ ವೈದ್ಯ – ನರಳಿ ನರಳಿ ಪ್ರಾಣಬಿಟ್ಟ ಬಾಲಕ

ಹಾವೇರಿ: ವಿದ್ಯುತ್ ಪ್ರವಹಿಸಿ ಅಸ್ವಸ್ಥಗೊಂಡಿದ್ದ ಬಾಲಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೇ ಪ್ರಾಣಬಿಟ್ಟ ಘಟನೆ ಹಾವೇರಿಯಲ್ಲಿ ನಡೆದಿದೆ. ವೈದ್ಯರ ನಿರ್ಲಕ್ಷ್ಯಕ್ಕೆ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ತಡಸ ಗ್ರಾಮದಲ್ಲಿ ಘಟನೆ ನಡೆದಿದೆ. 12 ವರ್ಷದ ಹಜರತ್ ಅಲಿ ಮೃತ ಬಾಲಕ.

ವಿದ್ಯುತ್ ತ್ಂತಿ ಸ್ಪರ್ಶಿಸಿ ಅಸ್ವಸ್ಥಗೊಂಡ ಬಾಲಕನನ್ನು ತಕ್ಷಣ ತಡಸ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ನೀಡಬೇಕಿದ್ದ ವೈದ್ಯರು ಕೆಲಸದ ನೆಪ ಹೇಳಿ ಆಸ್ಪತ್ರೆಯಿಂದಲೇ ಹೊರ ಹೋಗಿದ್ದರು. ಬೇರಾವ ಸಿಬ್ಬಂದಿಯೂ ಚಿಕಿತ್ಸೆ ನೀಡಲು ಮುಂದಾಗಿಲ್ಲ. 15 ನಿಮಿಷಕ್ಕೂ ಹೆಚ್ಚು ಕಾಲ ಜೀವನ್ಮರಣದ ನಡುವೆ ಹೋರಾಡಿದ ಬಾಲಕ ಕೊನೆಗೂ ಸಾವನ್ನಪ್ಪಿದ್ದಾನೆ.

ಬಿಗ್ ನ್ಯೂಸ್: ಸುಪ್ರೀಂಕೋರ್ಟ್ ಸಿಬ್ಬಂದಿಗೆ ಕೊರೋನಾ ಶಾಕ್, ಶೇಕಡ 50 ರಷ್ಟು ಸ್ಟಾಫ್ ಗೆ ಸೋಂಕು ದೃಢ

ವೈದ್ಯರ ಬೇಜವಾಬ್ದಾರಿ ಖಂಡಿಸಿ ಆರೋಗ್ಯ ಕೇಂದ್ರದ ಮುಂದೆ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...