ಬೆಂಗಳೂರು: ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿ ಸಮಸ್ಯೆಯಿಂದ ಬಳಲುತ್ತಿರುವ 11 ತಿಂಗಳ ಮಗುವಿನ ಚಿಕಿತ್ಸೆಗೆ ನೆರವಾಗುವಂತೆ ರಾಜ್ಯಸಭಾ ಸದಸ್ಯ ಚಂದ್ರಶೇಖರ್ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ.
11 ತಿಂಗಳ ಮಗು ಜನೀಶ್ ಚಿಕಿತ್ಸೆಗೆ 16 ಕೋಟಿ ರೂ.ಇಂಜಕ್ಷನ್ ಅಗತ್ಯವಿದ್ದು, ಇದನ್ನು ಅಮೆರಿಕಾದಿಂದ ಆಮದು ಮಾಡಿಕೊಳ್ಳಬೇಕಿದೆ. ಹೀಗಾಗಿ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಆರ್ಥಿಕ ಸಹಾಯ ನೀಡುವಂತೆ ಮನವಿ ಮಾಡಿದ್ದು, ಔಷಧದ ಮೇಲಿನ ಎಲ್ಲಾ ತೆರಿಗೆಗಳನ್ನು ಮನ್ನಾ ಮಾಡುವ ಮೂಲಕ ಮಗುವಿಗೆ ನೆರವಾಗುವಂತೆ ಪತ್ರದಲ್ಲಿ ಕೋರಿದ್ದಾರೆ.
ಗಮನಿಸಿ…! ಸೋಮವಾರದಿಂದ ಎಲ್ಲಾ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯ –ಇಲ್ಲದಿದ್ರೆ ಎರಡು ಪಟ್ಟು ಶುಲ್ಕ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೂ ಚಂದ್ರಶೇಖರ್ ಪತ್ರದ ಪ್ರತಿ ರವಾನಿಸಿದ್ದಾರೆ. ಬೆಂಗಳೂರಿನ ಸಂಜೀವಿನಿ ನಗರದ ನಿವಾಸಿಗಳಾದ ನವೀನ್ ಕುಮಾರ್ ಹಾಗೂ ಜ್ಯೋತಿ ದಂಪತಿಯ ಪುತ್ರ ಜನೀಶ್ ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿ ಸಮಸ್ಯೆಯಿಂದ ಬಳಲುತ್ತಿದ್ದು, ಸದ್ಯ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.