ಕೊರೊನಾ ಸಂದರ್ಭದಲ್ಲೂ ಕೆಲವೊಂದು ಕೆಲಸ ಕಾರ್ಯಗಳಿಗಾಗಿ ವಾಹನ ಮಾಲೀಕರು ಪ್ರಾದೇಶಿಕ ಸಾರಿಗೆ ಕಚೇರಿಗೆ ಹೋಗುವುದು ಅನಿವಾರ್ಯವಾಗಿತ್ತು. ಇದೀಗ ರಾಜ್ಯ ಸರ್ಕಾರ ಮೂರು ಸೇವೆಗಳನ್ನು ಆನ್ಲೈನ್ ಮೂಲಕ ಪಡೆಯುವ ಅವಕಾಶ ಕಲ್ಪಿಸಿದೆ.
ವಾಹನ ಮಾಲಿಕತ್ವ ವರ್ಗಾವಣೆ, ಸರಕು ಸಾಗಣೆ ರಹದಾರಿ ಹಾಗೂ ವಾಹನಗಳ ಅರ್ಹತಾ ಪ್ರಮಾಣ ಪತ್ರ ಸೇವೆಗಳನ್ನು ಆನ್ಲೈನ್ ಮೂಲಕ ಸ್ವೀಕರಿಸಲು ಹಾಗೂ ಕಾರ್ಯಗತಗೊಳಿಸಲು ನಿರ್ದೇಶಿಸಿ ಸಾರಿಗೆ ಇಲಾಖೆಗೆ ಸೂಚಿಸಲಾಗಿದೆ.
ಕಡ್ಡಾಯವಾಗಿ ಆನ್ ಲೈನ್ ಮುಖಾಂತರವೇ ಅರ್ಜಿ ಸ್ವೀಕರಿಸುವಂತೆ ತಿಳಿಸಲಾಗಿದ್ದು, ಕಾರ್ಯಗತಗೊಳಿಸುವುದು ಹಾಗೂ ಇದನ್ನು ಸೇವಾಸಿಂಧು ಪೋರ್ಟಲ್ ಮೂಲಕ ನಿರ್ವಹಿಸುವಂತೆ ತಿಳಿಸಲಾಗಿದೆ.