ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಎಂಬುದು ಈವರೆಗೆ ಪ್ರಹಸನದಂತಾಗಿತ್ತು. ಹಲವಾರು ಕಾರಣಗಳಿಂದ ವರ್ಗಾವಣೆ ಪ್ರಕ್ರಿಯೆ ಪದೇ ಪದೇ ಮುಂದೂಡಿಕೆಯಾಗಿದ್ದು, ಹೀಗಾಗಿ ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರುಗಳಿಗೆ ನಿರಾಸೆಯಾಗುತ್ತಿತ್ತು.
ಆದರೆ ಈಗ ಸರ್ಕಾರ ಶಿಕ್ಷಕರ ವರ್ಗಾವಣೆ ಕುರಿತಂತೆ ಹೊಸ ನಿಯಮ ತಂದಿದ್ದು, ಇದನ್ನು ಈಗ ಅಂತಿಮಗೊಳಿಸಲಾಗಿದೆ. ಹೀಗಾಗಿ ವರ್ಗಾವಣೆ ಪ್ರಕ್ರಿಯೆ ಸದ್ಯದಲ್ಲೇ ಆರಂಭವಾಗಲಿದೆ ಎಂದು ಹೇಳಲಾಗಿದೆ.
ಆದರೆ ರಾಜ್ಯದ 17 ತಾಲೂಕುಗಳಲ್ಲಿ ಶೇಕಡಾ 25 ಕ್ಕಿಂತ ಹೆಚ್ಚಿನ ಹುದ್ದೆಗಳು ಖಾಲಿ ಇರುವುದರಿಂದ ಈ ತಾಲೂಕುಗಳಲ್ಲಿ ವರ್ಗಾವಣೆ ನಡೆಯುವುದಿಲ್ಲ ಎಂದು ತಿಳಿದುಬಂದಿದೆ. ಇನ್ನುಳಿದಂತೆ ಉಳಿದ ಕಡೆ ವರ್ಗಾವಣೆ ಪ್ರಕ್ರಿಯೆ ನಿಯಮಾವಳಿಗಳಂತೆ ನಡೆಯಲಿದೆ.