ಕಲಬುರಗಿ: ಕೊರೊನಾ ಸಂಕಷ್ಟ ದೂರವಾಗಿ, ಲೋಕ ಕಲ್ಯಾಣಕ್ಕಾಗಿ ಸ್ವಾಮೀಜಿಯೊಬ್ಬರು ಅನ್ನಾಹಾರ ತೊರೆದು ಮರವೇರಿ ಕಠಿಣ ತಪಸ್ಸಿಗೆ ಕುಳಿತಿರುವ ಪ್ರಸಂಗ ನಡೆದಿದೆ.
ಬೀದರ್ ಜಿಲ್ಲೆಯ ಬಾವಗಿ ಗ್ರಾಮದ ಗವಿಸಿದ್ದ ಮಠದ 70 ವರ್ಷದ ಮಹದೇವ ಸ್ವಾಮೀಜಿ ಮೊಗಲಾ ಗ್ರಾಮದಲ್ಲಿ ಕಳೆದ 8 ದಿನಗಳಿಂದ ಮರದ ಮೇಲೇರಿ ಕಠಿಣ ತಪಸ್ಸು ಮಾಡುತ್ತಿದ್ದಾರೆ.
ಸ್ವಾಮೀಜಿಗಳ ಈ ಕಠಿಣ ತಪಸ್ಸು ನಾಳೆ ಮುಕ್ತಾಯವಾಗಲಿದ್ದು, ಮರದ ಮೇಲಿಂದ ಕೆಳಗಿಳಿದು ಬರಲಿದ್ದಾರೆ. ಹೀಗಾಗಿ ಸ್ವಾಮೀಜಿ ದರ್ಶನಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ.