ದಾವಣಗೆರೆ: ಲೈನ್ ಮ್ಯಾನ್ ನಿರ್ಲಕ್ಷದಿಂದ ಎಂತಹ ದುರಂತ ಸಂಭವಿಸಿದೆ ನೋಡಿ. ವಿದ್ಯುತ್ ಕಂಬ ಏರಿ ಲೈನ್ ದುರಸ್ತಿ ಮಾಡುತ್ತಿದ್ದ ವೇಳೆ ಕರೆಂಟ್ ಶಾಕ್ ಹೊಡೆದು ಗುತ್ತಿಗೆ ಕಾರ್ಮಿಕ ಕಂಬದ ಮೇಲೆಯೇ ಪ್ರಾಣ ಬಿಟ್ಟ ದಾರುಣ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಲೈನ್ ಮ್ಯಾನ್ ಕರೆಂಟ್ ತೆಗೆದಿದ್ದಾಗಿ ಹೇಳಿದ್ದ ಹಿನ್ನೆಲೆಯಲ್ಲಿ ವಿದ್ಯುತ್ ಲೈನ್ ದುರಸ್ತಿಗೆಂದು ಇಬ್ಬರು ಯುವಕರು ವಿದ್ಯುತ್ ಕಂಬ ಏರಿ ರಿಪೇರಿ ಆರಂಭಿಸಿದ್ದಾರೆ. ಆದರೆ ಏಕಾಏಕಿ ವಿದ್ಯುತ್ ಪ್ರವಹಿಸಲು ಆರಂಭವಾಗಿದೆ. ಕಂಬದ ಮೇಲಿಂದ ಕರೆಂಟ್ ತೆಗೆಯುವಂತೆ ಕೂಗಿಕೊಂಡರೂ ಲೈನ್ ಮ್ಯಾನ್ ಗೆ ಕರೆಂಟ್ ತೆಗೆಯಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಕರೆಂಟ್ ಶಾಕ್ ಹೊಡೆದು ಕಾರ್ಮಿಕ ಕಂಬದ ಮೇಲೆಯೇ ನರಳಿ ನರಳಿ ಪ್ರಾಣ ಬಿಟ್ಟಿದ್ದಾನೆ.
ಗಂಭೀರವಾಗಿ ಗಾಯಗೊಂಡಿರುವ ಇನ್ನೋರ್ವ ಕಾರ್ಮಿಕ ಜೀವನ್ಮರಣದ ನಡುವೆ ಹೋರಾಡುತ್ತಿದ್ದು, ಗಾಯಾಳುವನ್ನು ಆಸ್ಪತ್ರೆ ದಾಖಲಿಸಲಾಗಿದೆ.