ಬೆಂಗಳೂರು: ಕೊರೊನಾ ಎರಡನೇ ಅಲೆ ತಡೆಯಲು ರಾಜ್ಯ ಸರ್ಕಾರ 14 ದಿನಗಳ ಕಠಿಣ ನಿಯಮಗಳನ್ನು ಜಾರಿ ಮಾಡಿದೆ. ಆದರೆ ಜನರ ಸಂಕಷ್ಟಕ್ಕೆ ಪರಿಹಾರವೇನು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಲಾಕ್‌ಡೌನ್‌ಗೆ “ಬಿಗಿ ಕ್ರಮ” ಎಂದು ನಾಮಕರಣ ಮಾಡುವ ಮೂಲಕ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೆಲಸ ಮಾಡಿದೆ. ಸಿಎಂ ಬಿಎಸ್ ವೈ ಅವರೇ ನೀವು ಯಾವುದೇ ಹೆಸರಿನಿಂದ ಕರೆದರೂ ಜನರ ಕಷ್ಟ ನಷ್ಟಗಳು ಬದಲಾಗುವುದಿಲ್ಲ. ಈಗಾಗಲೇ ಕಳೆದ ಬಾರಿಯ ಲಾಕ್‌ಡೌನ್‌ನಿಂದ ಚೇತರಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ ಜನತೆ, ಚಿಂತಾಜನಕ ಸ್ಥಿತಿಯಲ್ಲಿದೆ ಆರ್ಥಿಕತೆ. ಹೀಗಿರುವಾಗ ಜನರ ಖಾತೆಗಳಿಗೆ ಹಣವನ್ನಾದರೂ ಹಾಕಿ ಎಂದು ಒತ್ತಾಯಿಸಿದೆ.
ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ: 18 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದ ಗುಡ್ ನ್ಯೂಸ್
ಜನತೆಗೆ ಜೀವವೂ ಮುಖ್ಯ, ಜೀವನವೂ ಮುಖ್ಯ. ಲಾಕ್‌ಡೌನ್ ಕಷ್ಟ ನಷ್ಟಗಳಿಗೆ ನಿಮ್ಮ ಪರಿಹಾರ ಕ್ರಮಗಳೇನು? ಆರ್ಥಿಕ ತಜ್ಞರ ಸಲಹೆಗಳನ್ನು ಎಷ್ಟರ ಮಟ್ಟಿಗೆ ಪಾಲಿಸಿದ್ದೀರೆಂದು ತಿಳಿಸಿ. ತಜ್ಞರ ಸಮಿತಿಯ ಶಿಫಾರಸುಗಳನ್ನು, ಸಲಹೆ, ಸೂಚನೆಗಳನ್ನು ಬಹಿರಂಗಗೊಳಿಸಿ ಎಂದು ಸರಣಿ ಟ್ವೀಟ್ ಮೂಲಕ ಆಗ್ರಹಿಸಿದೆ.