alex Certify ಲಸಿಕೆ ಅಭಾವವಿದ್ದರೂ ಅಭಿಯಾನ ಆರಂಭಿಸಿದ ಸರ್ಕಾರ: ನಡೆಸಿರುವ ಸಿದ್ಧತೆಯಾದರೂ ಏನು….? ಸಿದ್ದರಾಮಯ್ಯ ಪ್ರಶ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಸಿಕೆ ಅಭಾವವಿದ್ದರೂ ಅಭಿಯಾನ ಆರಂಭಿಸಿದ ಸರ್ಕಾರ: ನಡೆಸಿರುವ ಸಿದ್ಧತೆಯಾದರೂ ಏನು….? ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು: ದೇಶಾದ್ಯಂತ ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಿಕೆ ಅಭಿಯಾನ ಆರಂಭಿಸಿದ್ದಾರೆ. ಲಸಿಕೆ ಲಭ್ಯವೇ ಇಲ್ಲದಿರುವಾಗ ಅಭಿಯಾನಕ್ಕೆ ಚಾಲನೆ ನೀಡೀರುವುದು ಗೊಂದಲಕ್ಕೆ ಕಾರಣವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿಯೂ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ವ್ಯಾಕ್ಸಿನ್ ಸಿಗಬೇಕೆಂದರೆ ಆರುವರೆ ಕೋಟಿ ವ್ಯಾಕ್ಸಿನ್ ಅಗತ್ಯವಿದೆ. ರಾಜ್ಯದಲ್ಲಿ 1 ವ್ಯಾಕ್ಸಿನ್ ಗೆ 300 ರೂ. ಇದೆ. ಅಂದರೆ ರಾಜ್ಯಕ್ಕೆ ಸುಮಾರು 2000 ಕೋಟಿ ರೂಪಾಯಿ ವ್ಯಾಕ್ಸಿನ್ ಅಗತ್ಯವಿದೆ. ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಲಸಿಕೆ ಇನ್ನೂ ಸರ್ಕಾರಕ್ಕೆ ಲಭ್ಯವಾಗಿಲ್ಲ. ಆದರೆ ಲಸಿಕೆ ನೀಡಿಕೆ ಅಭಿಯಾನ ಆರಂಭಿಸಿದ್ದಾರೆ. ಜನರಿಗೆ ಲಸಿಕೆ ತಲುಪಲು ಸರ್ಕಾರ ನಡೆಸಿರುವ ಪೂರ್ವ ತಯಾರಿಯಾದರೂ ಏನು ಎಂದು ಪ್ರಶ್ನಿಸಿದ್ದಾರೆ.

ಪಲ್ಸ್ ಪೊಲೀಯೋ ಮಾದರಿಯಲ್ಲಿ ಮನೆ ಮನೆಗೆ ತೆರಳಿ ಕೊರೊನಾ ಲಸಿಕೆ ನೀಡಬೇಕು. ಸರ್ಕಾರ ಪೂರ್ವ ತಯಾರಿಯಿಲ್ಲದೇ ಲಸಿಕೆ ಅಭಿಯಾನ ಘೋಷಿಸಿದ್ದು ಈ ಬಗ್ಗೆ ಸ್ಪಷ್ಟತೆ ನೀಡಬೇಕು ಎಂದರು.

ಆಕ್ಸಿಜನ್ ಸಿಗದೇ ವೈದ್ಯ ಸೇರಿ 8 ಸೋಂಕಿತರು ಸಾವು

ನನಗಿರುವ ಮಾಹಿತಿ ಪ್ರಕಾರ ಈ ತಿಂಗಳಾಂತ್ಯಕ್ಕೆ ದೇಶದಲ್ಲಿ ಲಸಿಕೆ ಲಭ್ಯವಾಗುತ್ತದೆ. ಆದರೆ ಮೋದಿ ದೇಶದ ಪ್ರಧಾನಿಯಾಗಿ ಯಾವಾಗ ಲಸಿಕೆ ಲಭ್ಯವಾಗಲಿದೆ ಎಂಬುದರ ಬಗ್ಗೆ ಖಚಿತ ಮಾಹಿತಿಯನ್ನೂ ಪಡೆಯದೇ ಮೇ1 ರಿಂದ 18 ವರ್ಷದ ಮೇಲ್ಪಟ್ಟ ಎಲ್ಲರಿಗೂ ದೇಶಾದ್ಯಂತ ಲಸಿಕೆ ನೀಡಲಾಗುವುದು ಎಂದು ಘೋಷಿಸಿರುವುದು ಬೇಜವಾಬ್ದಾರಿತನದ ಭರವಸೆ ಎಂದು ಕಿಡಿಕಾರಿದರು.

ಇನ್ನು ರಾಜ್ಯದಲ್ಲಿ ಬಿಜೆಪಿ ಸಂಸದರಿಗೆ, ಸಚಿವರಿಗೆ ಬೇಕಾದಷ್ಟು ಲಸಿಕೆ ಲಭ್ಯವಾಗುತ್ತಿದೆ. ಸಂಸದ ಉಮೇಶ್ ಜಾದವ್ ಅವರಿಗೆ ಮೂಟೆಗಟ್ಟಲೇ ಸರ್ಕಾರ ಲಸಿಕೆ ನೀಡಿ ಕಳುಹಿಸಿದೆ. ಸಾಮಾನ್ಯ ಜನರು ಸೋಂಕಿನಿಂದ ಸಾವನ್ನಪ್ಪುತ್ತಿದ್ದರೂ ಅವರಿಗೆ ಮಾತ್ರ ಲಸಿಕೆ ಲಭ್ಯವಾಗುತ್ತಿಲ್ಲ ಈ ಬಗ್ಗೆ ಸಿಎಂ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...