ಕೊರೊನಾದಿಂದಾಗಿ ಈ ವರ್ಷ ಸರಳ ದರಸ ನಡೆದಿದೆ. ಕೊರೊನಾ ನಡುವೆ ದಸರಾ ಯಶಸ್ವಿಯಾಗಬೇಕು ಎಂಬ ಬಯಕೆ ಇಡೀ ನಾಡಿನ ಜನರದ್ದಾಗಿತ್ತು. ಆತಂಕದ ನಡುವೆಯೇ ದಸರಾವನ್ನು ಆಚರಿಸಲಾಗಿದೆ. ಆದರೆ ಯಾವುದೇ ಅಡೆ ತಡೆ ಇಲ್ಲದೆ ಚಾಮುಂಡಿಯ ಮೆರವಣಿಗೆ ಸರಳವಾಗಿಯೇ ನಡೆದಿದೆ. ಈ ಮಧ್ಯೆ ಮತ್ತೊಂದು ವಿಚಾರ ಹೆಚ್ಚು ಸದ್ದು ಮಾಡುತ್ತಿದೆ. ಅದೇ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಚಾಮುಂಡಿಯ ಪಲ್ಲಕ್ಕಿ ರಥ ಎಳೆದದ್ದು.
ಹೌದು, ತಂದೆ, ತಾಯಿ, ಪತಿ ಹಾಗೂ ಮಗುವಿನೊಂದಿಗೆ ಬೆಟ್ಟಕ್ಕೆ ತೆರಳಿದ ರೋಹಿಣಿ ಸಿಂಧೂರಿ ಚಾಮುಂಡಿಯ ಪಲ್ಲಕ್ಕಿ ರಥ ಎಳೆಯುವ ಮೂಲಕ ಹರಕೆಯನ್ನು ತೀರಿಸಿದ್ದಾರೆ. ಈ ಹರಕೆ ಹೊತ್ತಿದ್ದ ಕಾರಣವನ್ನೂ ಬಿಚ್ಚಿಟ್ಟಿದ್ದಾರೆ ರೋಹಿಣಿ. ಯಾವುದೇ ಅಡೆತಡೆಯಾಗದೇ ಸುಸೂತ್ರವಾಗಿ ದಸರಾ ನಡೆಯಬೇಕು ಎಂದು ಹರಕೆ ಹೊತ್ತಿದ್ದೆ ಅದರಂತೆ ತೀರಿಸಿದ್ದೇನೆ ಎಂದು ಹೇಳಿದ್ದಾರೆ.
ದೇವರ ಆಶಿರ್ವಾದದಂತೆ ಯಶಸ್ವಿಯಾಗಿ ದಸರಾ ನಡೆದಿದೆ. ಕೊರೊನಾದಿಂದ ವಿಶ್ವವಿಖ್ಯಾತ ದಸರಾ ಜಂಬೂಸವಾರಿ ಕೇವಲ 23 ನಿಮಿಷದಲ್ಲಿ ಮುಕ್ತಾಯಗೊಂಡಿತು. ಕೇವಲ 400 ಮೀಟರ್ ಮಾತ್ರ ಜಂಬೂಸವಾರಿ ನಡೆದಿದೆ.