ಬೆಂಗಳೂರು; ಕೊರೊನಾ ಸೋಂಕಿಗೆ ಪರಿಣಾಮಕಾರಿ ಔಷಧಿ ರೆಮ್ ಡಿಸಿವಿರ್ ಬೆಡಿಕೆ ಹೆಚ್ಚುತ್ತಿದ್ದಂತೆ ಕಾಳಸಂತೆಯಲ್ಲಿ ಅಕ್ರಮ ಮಾರಾಟ ಕೂಡ ಯಥೇಚ್ಚವಾಗಿ ಸಾಗಿದೆ. ಸ್ವತ ವೈದ್ಯರು, ಆರೋಗ್ಯ ಸಿಬ್ಬಂದಿಗಳೇ ಈ ಅಕ್ರಮದಲ್ಲಿ ಭಾಗಿಯಾಗುತ್ತಿದ್ದು, ಇಂಥವರ ವಿರುದ್ಧ ಸಿಸಿಬಿ ಸಮರ ಸಾರಿದೆ.
ರೆಮ್ ಡಿಸಿವಿರ್ ಇಂಜಕ್ಷನ್ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ವೈದ್ಯ, ಸ್ಟಾಫ್ ನರ್ಸ್ ಸೇರಿದಂತೆ 6 ಆರೋಪಿಗಳನ್ನು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಬಂಧಿತರು ಆಯುರ್ವೇದ ವೈದ್ಯ, ಬೆಂಗಳೂರಿನ ಯಲಹಂಕದ ಆಸ್ಪತ್ರೆಯೊಂದರ ಸ್ಟಾಫ್ ನರ್ಸ್ ಹಾಗೂ ಇತರ ನಾಲ್ವರು ಎನ್ನಲಾಗಿದೆ.
ಬಂಧಿತರಿಂದ 18 ರೆಮ್ ಡಿಸಿವಿರ್ ಇಂಜಕ್ಷನ್ ನ್ನು ವಶಕ್ಕೆ ಪಡೆಯಲಾಗಿದೆ. ಕೊರೊನಾ ಸೋಂಕಿತರು ಒಂದೆಡೆ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪುತ್ತಿದ್ದರೆ ಇನ್ನೊಂದೆಡೆ ರೆಮ್ ಡಿಸಿವಿರ್ ಔಷಧ ಸಿಗದೇ ಆಸ್ಪತ್ರೆಗಳಲ್ಲೇ ಮೃತಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೋಗಿಗಳ ಪ್ರಾಣ ಉಳಿಸಿಬೇಕಾದ ಜೀವರಕ್ಷಕರಾದ ವೈದ್ಯರೇ ರೆಮ್ ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟ ಮಾಡುವ ಮೂಲಕ ಪ್ರಾಣ ಹಿಂಡುವ ಕೆಲಸ ಮಾಡುತ್ತಿದ್ದಾರೆ.