ಚಿಕ್ಕಬಳ್ಳಾಪುರ: ಆರೋಗ್ಯ ಸಚಿವರೊಂದಿಗೆ ಕೋವಿಡ್ ಆಸ್ಪತ್ರೆಗಳಿಗೆ ಭೇಟಿ ನೀಡಿದ ಇಲಾಖೆ ಜಂಟಿ ನಿರ್ದೇಶಕ ವೈದ್ಯರನ್ನು ಬ್ಲ್ಯಾಕ್ ಮೇಲ್ ಮಾಡಿ ರೆಮ್ ಡಿಸಿವಿರ್ ಪಡೆದು ಇದೀಗ ಬಂಧನಕ್ಕೊಳಗಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ಬೆಳಕಿಗೆ ಬಂದಿದೆ.
ಶಿಡ್ಲಘಟ್ಟ, ಬಾಗೇಪಲ್ಲಿ ಆಸ್ಪತ್ರೆಗೆ ಆರೋಗ್ಯ ಸಚಿವ ಡಾ. ಸುಧಾಕರ್ ಭೇಟಿ ನೀಡಿದ್ದ ವೇಳೆ ಸಚಿವರ ಜೊತೆಗೇ ಬಂದ ಆರೋಗ್ಯ ಇಲಾಖೆ ಜಂಟಿ ನಿರ್ದೇಶಕ ಮುರಳಿ ಕೃಷ್ಣ, ಬಳಿಕ ಆಸ್ಪತ್ರೆ ವೈದ್ಯಾಧಿಕಾರಿಗಳನ್ನು ಬ್ಲ್ಯಾಕ್ ಮೇಲ್ ಮಾಡಿ 10ಕ್ಕೂ ಹೆಚ್ಚು ರೆಮ್ ಡಿಸಿವಿರ್ ಪಡೆದಿದ್ದಲ್ಲದೇ, ಆರೋಗ್ಯಧಿಕಾರಿಗೂ ಬೆದರಿಕೆ ಹಾಕಿ ವೆಂಟಿಲೇಟರ್ ಗೆ ಬೇಡಿಕೆ ಇಟ್ಟಿದ್ದರು. ಬ್ಲ್ಯಾಕ್ ಮೇಲ್ ಮಾಡಿ ಪಡೆದ ರೆಮ್ ಡಿಸಿವಿರ್ ಇಂಜಕ್ಷನ್ ನ್ನು ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚಿನ ಹಣಕ್ಕೆ ನೀಡಲು ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಜಾಗತಿಕ ಪಕ್ಷಿ ಗಣತಿಯಲ್ಲಿ ಬಯಲಾಯ್ತು ಕುತೂಹಲಕಾರಿ ಅಂಶ..!
ಮುರಳಿಕೃಷ್ಣ ವಿರುದ್ಧ ಬಾಗೇಪಲ್ಲಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಗ್ಯ ಇಲಾಖೆ ಜಂಟಿ ನಿರ್ದೇಶಕರನ್ನು ಬಂಧಿಸಿದ ಪೊಲೀಸರು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.