ಕೊರೊನಾ ಮಹಾಮಾರಿಯಿಂದ ಬೇಸತ್ತಿದ್ದ ರಾಜ್ಯದ ಜನತೆಗೆ ಇದೀಗ ಬ್ರಿಟನ್ ರೂಪಾಂತರಿ ವೈರಸ್ ಮತ್ತೆ ಭಾರತಕ್ಕೆ ಕಾಲಿಟ್ಟಿದೆ. ಇಂದು ಬೆಂಗಳೂರಿನಲ್ಲಿ ಮೂರು ಜನರಿಗೆ ರೂಪಾಂತರಿ ವೈರಸ್ ಸೋಂಕು ಕಾಣಿಸಿದೆ. ನಿನ್ನೆಯವರೆಗೆ ದೇಶದಲ್ಲಿ ಆರು ರೂಪಾಂತರಿ ಕೇಸ್‌ಗಳು ಪತ್ತೆಯಾಗಿರೋದನ್ನು ಕೇಂದ್ರ ಸರ್ಕಾರ ಧೃಡಪಡಿಸಿದೆ. ಅದರಲ್ಲಿ ಮೂರು ಕೇಸ್‌ಗಳು ನಮ್ಮ ರಾಜ್ಯದಲ್ಲಿಯೆ ಪತ್ತೆಯಾಗಿವೆ.
ಇನ್ನು ಈ ವೈರಸ್ ಪತ್ತೆಯಾಗುತ್ತಿದ್ದಂತೆ ಜನರಲ್ಲಿ ಹೆಚ್ಚಿನ ಆತಂಕ ಕೂಡ ಮನೆ ಮಾಡಿತ್ತು. ಏಕೆಂದರೆ ಇದರ ಹಬ್ಬುವಿಕೆಯ ವೇಗ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಜನ ಸಾಮಾನ್ಯರಲ್ಲಿ ಆತಂಕ ಅಂತು ಇದ್ದೇ ಇದೆ. ಇತ್ತ ಕೇಂದ್ರ ಆರೋಗ್ಯ ಇಲಾಖೆಯೇ ಹೇಳಿದಂತೆ ಇದರ ಭೀಕರತೆ ಅಷ್ಟೇನು ಇಲ್ಲ. ಅತ್ಯಂತ ಶಕ್ತಿಶಾಲಿಯೂ ಈ ರೂಪಾಂತರಿ ವೈರಸ್ ಅಲ್ಲ ಎಂದು ಹೇಳಿದೆ.
ಇದರ ಜೊತೆಗೆ ಇಂಗ್ಲೆಂಡ್‌ನ ಸಾರ್ವಜನಿಕ ಆರೋಗ್ಯ ಇಲಾಖೆಯ ತುಲನಾತ್ಮಕ ಅಧ್ಯಯನದ ವರದಿಯೂ ಈ ವೈರಸ್ ಬಗ್ಗೆ ಹೇಳಿದೆ. ಈ ವೈರಸ್ ಹೆಚ್ಚಿನ ಅನಾರೋಗ್ಯ ಸೃಷ್ಟಿ ಮಾಡೋದಿಲ್ಲ. ಇತರೆ ಕೊರೊನಾ ವೈರಸ್‌ಗಿಂತ ಇದು ಹೆಚ್ಚಿನ ಶಕ್ತಿಶಾಲಿಯಲ್ಲ ಎಂದಿದೆ.