alex Certify ರಾಸಲೀಲೆ ಪ್ರಕರಣ: ಹೊಸ ಬಾಂಬ್ ಸಿಡಿಸಿದ HDK | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಸಲೀಲೆ ಪ್ರಕರಣ: ಹೊಸ ಬಾಂಬ್ ಸಿಡಿಸಿದ HDK

ಮೈಸೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬೆನ್ನಲ್ಲೇ ರಾಜ್ಯದಲ್ಲಿ ಸಿಡಿ ಪ್ರಕರಣ ಸಾಕಷ್ಟು ಸುದ್ದಿ ಮಾಡುತ್ತಿದ್ದು, ಹಲವು ಪ್ರಭಾವಿ ರಾಜಕಾರಣಿಗಳ ಸಿಡಿ ಇದೆ ಎಂಬ ಮಾತು ಕೇಳಿಬರುತ್ತಿದೆ. ಈ ವಿಚಾರವಾಗಿ ಬ್ಲಾಕ್ ಮೇಲ್ ತಂತ್ರಗಾರರಿಗೆ ಟಾಂಗ್ ನೀಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮೊದಲು ಈ ಬ್ಲಾಕ್ ಮೇಲ್ ಮಾಡುತ್ತಿರುವವರನ್ನು ಬಂಧಿಸಿ ಸಿಡಿ ವಶಪಡಿಸಿಕೊಳ್ಳಬೇಕು ಎಂದಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ರಮೇಶ್ ಜಾರಕಿಹೊಳಿಯವರನ್ನು ಮಂತ್ರಿಪದವಿಯಿಂದ ಕೆಳಗಿಳಿಸಬೇಕು ಎಂಬ ಉದ್ದೇಶದಿಂದಲೇ ಹೀಗೆ ಮಾಡಿದ್ದರು. ಅದರಲ್ಲಿ ಅವರು ಸಫಲರಾಗಿದ್ದಾರೆ. ಈ ಸಿಡಿ ಪ್ರಕರಣದಲ್ಲಿ 5 ಕೋಟಿ ವ್ಯವಹಾರ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಮಗ್ರವಾಗಿ ತನಿಖೆ ನಡೆಯಬೇಕು ಎಂದರು.

ಜಾರಕಿಹೊಳಿ ಸಿಡಿ ಬಳಿಕ ಇನ್ನೂ ಹಲವು ಪ್ರಭಾವಿ ರಾಜಕಾರಣಿಗಳ, ಮಾಜಿ ಸಿಎಂ ಗಳ ಸಿಡಿ ಇದೆ ಎಂದು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಮೊದಲು ಆ ಬ್ಲಾಕ್ ಮೇಲ್ ವ್ಯಕ್ತಿಗಳನ್ನು ಬಂಧಿಸಿ ಅವರಿಂದ ಮಾಹಿತಿ ಪಡೆದು ರಾಜ್ಯ ಸರ್ಕಾರವೇ ಎಲ್ಲಾ ಮಾಹಿತಿಗಳನ್ನು ರಾಜ್ಯದ ಜನತೆ ಮುಂದೆ ಇಡಬೇಕು. ಅಲ್ಲದೇ ಮಾಜಿ ಸಿಎಂ ಗಳ ಸಿಡಿ ಇದೆ ಎನ್ನಲಾಗುತ್ತಿದೆ. ಆ ಮಾಜಿ ಸಿಎಂ ಗಳು ಯಾರು ಎಂಬುದು ಬಹಿರಂಗವಾಗಲಿ. ಇಂದು ರಾಜಕೀಯ ಕಲುಷಿತವಾಗಿದೆ. ಇಂಥಾ ಕೇಸ್ ನಿಂದಾಗಿ ಜನರು ನಮ್ಮನ್ನು ತಪ್ಪಾಗಿ ತಿಳಿಯುತ್ತಾರೆ ಎಂದು ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...