ಬೆಂಗಳೂರು: ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದ ವಿಚಾರವಾಗಿ ಮಾತನಾಡಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ, ರಮೇಶ್ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿದ್ದು, ದೂರುದಾರ ದಿನೇಶ್ ಕಲ್ಲಹಳ್ಳಿಯನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ರಮೇಶ್ ಜಾರಕಿಹೊಳಿ ಪರ ನಾನು ಮಾತನಾಡುತ್ತಿಲ್ಲ. ಅವರು ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲಿ. ಕ್ಷಮೆಯಾಚಿಸಲಿ. ಆದರೆ ಸಿಡಿ ಪ್ರಕರಣದ ಹಿಂದೆ ದೊಡ್ಡ ಷಡ್ಯಂತ್ರವೇ ನಡೆದಿದೆ ಎನಿಸುತ್ತಿದೆ. ಹಾಗಾಗಿ ದಿನೇಶ್ ಕಲ್ಲಹಳ್ಳಿಯನ್ನು ಹಿಡಿದು ನಾಲ್ಕು ಬಾರಿಸಿದರೆ ಸತ್ಯಾಸತ್ಯತೆ ಹೊರಬರುತ್ತೆ ಎಂದು ಹೇಳಿದರು.
ದಿನೇಶ್ ಕಲ್ಲಹಳ್ಳಿಗೂ ವಿಡಿಯೋದಲ್ಲಿರುವ ಮಹಿಳೆಗೂ ಏನು ಸಂಬಂಧ? ಮಹಿಳೆಯನ್ನು ನೋಡಿದರೆ ಉದ್ದೇಶಪೂರ್ವಕವಾಗಿಯೇ ವಿಡಿಯೋ ಚಿತ್ರೀಕರಿಸಿದಂತಿದೆ. ಆ ಮಹಿಳೆ ಸ್ತ್ರೀ ಕುಲಕ್ಕೆ ಅಪಮಾನ ಎಂದು ಹೇಳಿದರು.