ಬೆಂಗಳೂರು: ಕೊರೊನಾ ಸೋಂಕಿತರ ನೆರವಿಗಾಗಿ ಕಾಂಗ್ರೆಸ್ ಕೇರ್ಸ್ ಅಭಿಯಾನದಡಿ ಆಂಬುಲೆನ್ಸ್ ಗಳಿಗೆ ಚಾಲನೆ ನೀಡಲಾಗಿದ್ದು, ಈ ಮೂಲಕ ಜಿಲ್ಲಾ ಕೇಂದ್ರಗಳಿಗೆ 10 ಆಂಬುಲೆನ್ಸ್ ವಾಹನ ಕಾರ್ಯ ನಿರ್ವಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸೋಂಕಿತರ ಸಹಾಯಕ್ಕಾಗಿ ಆಂಬುಲೆನ್ಸ್ ಗಳಿಗೆ ಚಾಲನೆ ನಿಡಿದ್ದೇವೆ. ಇನ್ನು ಎಐಸಿಸಿ ನಿರ್ದೇಶನದ ಮೇರೆಗೆ ಸಾಮಾಜಿಕ ಜಾಲತಾಣಗಳಿಗೆ ಹೊಸ ರೂಪು ರೇಷೆ ನೀಡಲು ಸೋಷಿಯಲ್ ಮೀಡಿಯಾ ವಾರಿಯರ್ಸ್ ನೇಮಕ ಮಾಡುತ್ತಿದ್ದೇವೆ.
ಗ್ರಾಹಕರಿಗೆ ಬಿಗ್ ಶಾಕ್: ಠೇವಣಿಗಳ ಮೇಲೆ ಶೇ.2ರಷ್ಟು ಬಡ್ಡಿ ಇಳಿಕೆ
ಇದೇ ವೇಳೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಡಿ.ಕೆ.ಶಿವಕುಮಾರ್, ರಾಜ್ಯ ಸರ್ಕಾರದಲ್ಲಿ ನಂಬಲಾಗದ ಘಟನೆಗಳು ನಡೆಯುತ್ತಿವೆ. ರೆಮ್ ಡಿಸಿವಿರ್ ಇಂಜಕ್ಷನ್ ಬ್ಲಾಕ್ ಮಾಡಲಾಗಿದೆ. ರಾಜಸ್ಥಾನ, ಛತೀಸ್ ಗಢ ಸರ್ಕಾರಗಳು ಆರ್ಡರ್ ಮಾಡಿದ್ದವು. ಬಿಜೆಪಿಯವರಿಗೆ ಮಾತ್ರ ಡಬ್ಬದಲ್ಲಿ ಲಸಿಕೆ ತುಂಬಿ ಕಳಿಸಲಾಗುತ್ತಿದೆ. ಬಿಜೆಪಿ ಶಾಸಕರಿಗೆ, ಸಚಿವರಿಗೆ ಲಸಿಕೆ ಸಿಗುತ್ತಿದೆ. ಆದರೆ ರಾಜ್ಯದ ಜನತೆಗೆ, ಸೋಂಕಿತರಿಗೆ ಸಿಗುತ್ತಿಲ್ಲ. ಇದಕ್ಕೆ ಸಿಎಂ ಉತ್ತರಿಸಬೇಕು ಎಂದು ಆಗ್ರಹಿಸಿದರು.