ಕಲಬುರ್ಗಿ; ರಾಜ್ಯದಲ್ಲಿ ಕೊರೊನಾ ಸೋಂಕಿತರು ಆಕ್ಸಿಜನ್ ಇಲ್ಲದೇ ಪರದಾಡುತ್ತಿದ್ದಾರೆ. ಅತಿವೃಷ್ಠಿ, ಅನಾವೃಷ್ಟಿಯಿಂದ ಹಿಡಿದು ಆಕ್ಸಿಜನ್ ಸಂಕಷ್ಟದವರೆಗೂ ರಾಜ್ಯದ ಜನರ ಪರ ನಿಂತು ಮಾತನಾಡುವ ಎದೆಗಾರಿಕೆ ರಾಜ್ಯದ 25 ಬಿಜೆಪಿ ಸಂಸದರಿಗಿಲ್ಲವಾಗಿದೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಕಲಬುರ್ಗಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಜನರು ಸಾಯುತ್ತಿದ್ದಾರೆ. ಆಕ್ಸಿಜನ್, ಲಸಿಕೆ ಇಲ್ಲದೇ ಪರದಾಡುತ್ತಿದ್ದಾರೆ ಇಂತಹ ಸ್ಥಿತಿ ಎದುರಾದರೂ ಬಿಜೆಪಿ ಸಂಸದರು ಕೇಂದ್ರದ ವಿರುದ್ಧ ಧ್ವನಿ ಎತ್ತದೇ ಮೌನವಾಗಿ ಕುಳಿತಿದ್ದಾರೆ. ರಾಜ್ಯದ 25 ಬಿಜೆಪಿ ಸಂಸದರು ಬದುಕಿದ್ದಾರೆಯೇ ಅಥವಾ ಸತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.
ಕೋವಿಡ್ ಕರ್ತವ್ಯಕ್ಕಾಗಿ ಮಗಳ ಮದುವೆಯನ್ನೇ ಮುಂದೂಡಿದ ಪೊಲೀಸ್
ಈಗಲೂ ಜನರ ಪರ ಧ್ವನಿ ಎತ್ತದವರು ಇನ್ನ್ಯಾವಾಗ ಎತ್ತುತ್ತಾರೆ. ಎಲ್ಲರೂ ರಾಜೀನಾಮೆ ಕೊಡುವುದು ಉತ್ತಮ. ರಾಜ್ಯದ ಪರ ಹೋರಾಡಲು ಇವರಿಗೆ ಎದೆಗಾರಿಕೆ ಇಲ್ಲ. ಜನರು ಇವರನ್ನು ಕತ್ತೆ ಕಾಯಲೆಂದು ಆಯ್ಕೆ ಮಾಡಿ ಕಳುಹಿಸಿದ್ದಾರಾ? 25 ಸಂಸದರು ಎಲ್ಲಿ ಅಡಗಿ ಕುಳಿತಿದ್ದೀರಿ ಎಂದು ಕಿಡಿಕಾರಿದ್ದಾರೆ.