ಬೆಂಗಳೂರು: ಪೊಲೀಸ್ ಇಲಾಖೆ ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ E- Lost Report App ಅನ್ನು ಪರಿಚಯಿಸುತ್ತಿದೆ.
ಕರ್ನಾಟಕ ರಾಜ್ಯ ಪೊಲೀಸ್ ಆಪ್ ಗೆ ಲಾಗಿನ್ ಆಗುವುದರ ಮೂಲಕ E- Lost Report App ಆಪ್ ನಲ್ಲಿ ದೂರು ಸಲ್ಲಿಸಬಹುದು. ಸಾರ್ವಜನಿಕರು ವಸ್ತುಗಳನ್ನು ಕಳೆದುಕೊಂಡಲ್ಲಿ ಪೊಲೀಸ್ ಠಾಣೆಗೆ ನೇರವಾಗಿ ಭೇಟಿ ನೀಡದೆ ಆಪ್ ನಲ್ಲಿ ಮಾಹಿತಿ ನೀಡಬಹುದಾಗಿದೆ.
E- Lost Report App ನಲ್ಲಿ ಮಾಹಿತಿ ಭರ್ತಿ ಮಾಡುವ ಮೂಲಕ ದೂರು ದಾಖಲಿಸಿ ತಕ್ಷಣವೇ ಸ್ವೀಕೃತಿ ಪಡೆಯಬಹುದು. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಚೆಕ್, ಡಿಡಿ, ಐಡೆಂಟಿಟಿ ಕಾರ್ಡ್, ಐಪ್ಯಾಡ್, ಟ್ಯಾಬ್ಲೆಟ್, ಮೊಬೈಲ್, ಪಾನ್ ಕಾರ್ಡ್, ಪಾಸ್ ಬುಕ್, ಪಾಸ್ಪೋರ್ಟ್, ರೇಷನ್ ಕಾರ್ಡ್, ವಿಡಿಯೋ ಕ್ಯಾಮೆರಾ ಎಜುಕೇಷನಲ್ ಸರ್ಟಿಫಿಕೇಟ್, ವೋಟರ್ ಐಡಿ ಕಾರ್ಡ್ ಕಳೆದುಕೊಂಡಲ್ಲಿ ಪೊಲೀಸ್ ಠಾಣೆಗೆ ಭೇಟಿ ನೀಡದೆ ಅಪ್ ನಲ್ಲಿಯೇ ದೂರು ದಾಖಲಿಸಿ ಸ್ವೀಕೃತಿ ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.