ಬೆಂಗಳೂರು: ಕೊರೊನಾ ಸೋಂಕು ವೇಗವಾಗಿ ಹರಡುತ್ತಿದೆ. ಕೋವಿಡ್ ಪಾಸಿಟಿವ್ ಎಂದಾಕ್ಷಣ ಜನರು ಭಯಭೀತರಾಗುತ್ತಿದ್ದಾರೆ. ಬೇರೆಯವರಿಗೆ ಆಕ್ಸಿಜನ್ ಸಿಗುತ್ತಿಲ್ಲ ಎಂಬುದನ್ನು ನೋಡಿ ಆತಂಕಕ್ಕೀಡಾಗಿದ್ದಾರೆ. ಹಾಗಾಗಿ ಪಾಸಿಟಿವ್ ಬಂತೆಂದರೆ ಆಕ್ಸಿಜನ್ ಕೇಳುತ್ತಿದ್ದಾರೆ ಈ ರೀತಿ ಭಯಗೊಳ್ಳುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೋವಿಡ್ ಪಾಸಿಟಿವ್ ಎಂದ ತಕ್ಷಣ ಉಸಿರಾಟದ ತೊಂದರೆಯಾಗುತ್ತದೆ ಎಂದು ಭಯಗೊಳ್ಳುವುದು ಬೇಡ. ಜನರು ಪ್ರತಿದಿನ ಪ್ರಾಣಾಯಾಮ ಮಾಡಿ. ಬೆಳಿಗ್ಗೆ 5-6 ಗಂಟೆಯಲ್ಲಿ ಒಳ್ಳೆಯ ಗಾಳಿಯಿರುವಲ್ಲಿ ಕುಳಿತು 30 ನಿಮಿಷಗಳ ಕಾಲ ಲಘು ವ್ಯಾಯಾಮಗಳನ್ನು ಮಾಡಿ. ಇದರಿಂದ ಶ್ವಾಸಕೋಶದಲ್ಲಿ ಉಸಿರಾಡುವ ಶಕ್ತಿ ಬಲವಾಗುತ್ತದೆ. ಉತ್ತಮವಾದ ಗಾಳಿ, ಬೆಳಕು, ಆಹಾರ ಸೇವನೆ, ಮಾಸ್ಕ್, ದೈಹಿಕ ಅಂತರ ಪಾಲಿಸಿ ಎಂದು ಸಲಹೆ ನಿಡಿದರು.
15 ವರ್ಷದಿಂದ ಕೆಲಸಕ್ಕೆ ಗೈರು ಹಾಜರಾದ್ರೂ ಸಂಬಳ ಮಾತ್ರ ತಪ್ಪದೆ ಪಡೆದ ಭೂಪ…!
ರಾಜ್ಯದಲ್ಲಿ ಸೋಂಕಿತರಿಗೆ ಚಿಕಿತ್ಸೆ, ಲಸಿಕೆ, ಬೆಡ್ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು. ಬೆಂಗಳೂರಿನಲ್ಲಿ ವಿಶೇಷವಾಗಿ ಐಸಿಯು, ಬೆಡ್, ವೆಂಟಿಲೇಟರ್ ಕೊರತೆಯಿದೆ. ವಾರದೊಳಗೆ 2000 ಐಸಿಯು ಬೆಡ್ ಗಳನ್ನು ವ್ಯವಸ್ಥೆ ಮಾಡುತ್ತಿದ್ದೇವೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ 500 ಬೆಡ್ ವ್ಯವಸ್ಥೆ ಮಾಡಲಾಗುವುದು ಎಂದರು.