ಸಾರ್ವಜನಿಕರು ವಾಹನ ನೋಂದಣಿ, ಚಾಲನಾ ಕಲಿಕಾ ಪರವಾನಿಗೆ ಪತ್ರ, ಚಾಲನಾ ಪರವಾನಗಿ ಪತ್ರ ಸೇರಿದಂತೆ ತಮ್ಮ ಹಲವಾರು ಕಾರ್ಯಗಳಿಗೆ ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ನೀಡುವುದು ಅನಿವಾರ್ಯ.
ಆದರೆ ಕೆಲವೊಮ್ಮೆ ಇದಕ್ಕಾಗಿ ಜಿಲ್ಲಾ ಕೇಂದ್ರಗಳಿಗೆ ಬೇಟಿ ನೀಡಬೇಕಾಗುತ್ತದೆ. ಪ್ರಸ್ತುತ ರಾಜ್ಯದಲ್ಲಿ 72 ಆರ್.ಟಿ.ಓ. ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಇದೀಗ ಮತ್ತೆ ಐದು ಹೊಸ ಆರ್.ಟಿ.ಓ. ಕಚೇರಿ ಆರಂಭಿಸಲು ಸರ್ಕಾರ ಮುಂದಾಗಿದೆ.
ಜೆಡಿಎಸ್ ಗೆ ಮತ್ತೊಂದು ಬಿಗ್ ಶಾಕ್, ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ
ಸಾರಿಗೆ ಸಚಿವ ಲಕ್ಷ್ಮಣ ಸವದಿ ವಿಧಾನಸಭೆಯಲ್ಲಿ ಈ ವಿಷಯ ತಿಳಿಸಿದ್ದು, ಕುಂದಾಪುರ, ಸಿಂಧನೂರು ಅಥವಾ ಲಿಂಗಸಗೂರು, ಇಂಡಿ ಅಥವಾ ಸಿಂದಗಿ, ಮುದ್ದೇಬಿಹಾಳ ಹಾಗೂ ಹೊನ್ನಾಳಿಯಲ್ಲಿ ಹೊಸ ಆರ್.ಟಿ.ಓ. ಕಚೇರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.