
ಕೊರೊನಾ ಮಹಾಮಾರಿ ಯಾವ ವರ್ಗವನ್ನೂ ಬಿಟ್ಟಿಲ್ಲ. ಮನೆಯಲ್ಲಿಯೇ ಇರಿ ಸೇಫಾಗಿರಿ ಎಂದು ಹೇಳುತ್ತಿದ್ದ ರಾಜಕಾರಣಿಗಳಿಗೂ ಕೊರೊನಾ ಅಂಟಿದೆ. ಇದೀಗ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬೋಜೆಗೌಡರಿಗೆ ಸೋಂಕು ಧೃಡಪಟ್ಟಿದೆ.
ಹೌದು, ಇತ್ತೀಚೆಗಷ್ಟೆ ಸಂಸದೆ ಸುಮಲತಾ ಅವರಿಗೆ ಸೋಂಕು ಧೃಡಪಟ್ಟಿತ್ತು. ಈ ವಿಚಾರವನ್ನು ಸ್ವತಃ ಸುಮಲತಾ ಅವರೇ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದರು. ಇದರ ಬೆನ್ನಲ್ಲೇ ಇದೀಗ ಈ ಮಹಾಮಾರಿ ಜೆಡಿಎಸ್ ವಿಧಾನಪರಿಷತ್ ಸದಸ್ಯ ಬೋಜೆಗೌಡರಿಗೆ ಸೋಂಕು ತಗುಲಿದೆ. ಇವರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.