ರಾಯಚೂರು: ರಾಜ್ಯಾದ್ಯಂತ ವರುಣನ ರೌದ್ರಾವತಾರ ಮತ್ತೆ ಜೋರಾಗಿದ್ದು, ನದಿ, ಹಳ್ಳಕೊಳ್ಳಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿವೆ. ಈ ನಡುವೆ ಮಸ್ಕಿ ಜಲಾಶಯದ ನೀರಿನ ಸೆಳೆತಕ್ಕೆ ಸಿಲುಕಿ ವ್ಯಕ್ತಿಯೊಬ್ಬ ನೋಡ ನೋಡುತ್ತಿದ್ದಂತೆಯೇ ನೀರು ಪಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ಮಸ್ಕಿ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದ್ದು, ಏಕಾಏಕಿ ಮಸ್ಕಿ ಹಳ್ಳದಲ್ಲಿ ನೀರಿನ ಪ್ರಮಾಣ ಹೆಚ್ಚಿದೆ. ಪರಿಣಾಮ ಬಹಿರ್ದೆಸೆಗೆಂದು ಹೋಗಿದ್ದ ಇಬ್ಬರು ಹಳ್ಳದ ಮಧ್ಯೆ ಸಿಲುಕಿಕೊಂಡು ಪರದಾಡಿದ್ದಾರೆ.
ವಿಷಯ ತಿಳಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ರಕ್ಷಣೆಗೆಂದು ಧಾವಿಸಿದ್ದಾರೆ. ಹಳ್ಳದಲ್ಲಿ ಸಿಲುಕಿದ್ದ ಯುವಕರನ್ನು ಹಗ್ಗದ ಮೂಲಕ ರಕ್ಷಣೆ ಮಾಡಲು ಅಗ್ನಿಶಾಮಕ ಸಿಬ್ಬಂದಿ ಮುಂದಾಗಿದ್ದಾರೆ. ಆದರೆ ಹಗ್ಗ ಕೈತಪ್ಪಿದ ಪರಿಣಾಮ ಚೆನ್ನಬಸವ ಎಂಬ ವ್ಯಕ್ತಿ ನೀರು ಪಾಲಾಗಿದ್ದಾನೆ. ಇನ್ನೋರ್ವ ವ್ಯಕ್ತಿಯನ್ನು ರಕ್ಷಿಸಲಾಗಿದೆ.